ನ್ಯೂಸ್ ನಾಟೌಟ್: ಇವಿಎಂ ಅನ್ನು ನೆಲಕ್ಕೆ ಎಸೆದು ಪುಡಿಗೈದಿರುವ ಸಿಸಿಟಿವಿ ಫೂಟೇಜ್ ಬಹಿರಂಗಗೊಂಡಿದ್ದು, ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಪಕ್ಷದ ಶಾಸಕ ಆಂಧ್ರದ ಮಾಚೆರ್ಲಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಆಡಳಿತರೂಢ ವೈಎಸ್ ಆರ್ ಸಿ ಶಾಸಕನ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗ ಆಂಧ್ರಪ್ರದೇಶ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದೆ.
ಮೇ 13 ರಂದು ನಡೆದ ಚುನಾವಣೆಯಲ್ಲಿ ಮಾಚೆರ್ಲಾ ವಿಧಾನಸಭಾ ಕ್ಷೇತ್ರದಲ್ಲಿನ ಏಳು ಇವಿಎಂ ಯಂತ್ರಗಳನ್ನು ನೆಲಕ್ಕೆ ಎಸೆದು ಪುಡಿಗೈದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈಗ ಶಾಸಕನ ವಿರುದ್ಧ ಕ್ರಮಕೈಗೊಳ್ಳಲಾಗಿದೆ.
ಈ ಮತಯಂತ್ರಗಳನ್ನು ಸ್ಥಳೀಯ ಶಾಸಕ ಪಿ.ರಾಮಕೃಷ್ಣ ರೆಡ್ಡಿ ಪುಡಿಗೈದಿರುವುದು ಎಂದು ತಿಳಿದಿದೆ. ಆಂಧ್ರಪ್ರದೇಶದಲ್ಲಿ ಮೇ 13ರಂದು ಲೋಕಸಭೆ ಮತ್ತು ವಿಧಾನಸಭೆಗೆ ಒಂದೇ ದಿನ ಮತದಾನ ನಡೆದಿತ್ತು. ಚುನಾವಣೆ ವೇಳೆ ಪಲ್ನಾಡು, ತಿರುಪತಿ ಹಾಗೂ ಅನಂತಪುರ ಪ್ರದೇಶದಲ್ಲಿ ಹಿಂಸಾಚಾರ ನಡೆದಿತ್ತು.
Click 👇