ನ್ಯೂಸ್ ನಾಟೌಟ್: ಒಬ್ಬ ಮಹಿಳೆ ತನ್ನ ಗಂಡನಿಗೆ ವಿಚಿತ್ರ ಮತ್ತು ಕ್ರೂರವಾಗಿ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಪತಿಯನ್ನು ಪ್ರಜ್ಞೆ ತಪ್ಪಿಸಿ ಆತನನ್ನು ಬೆತ್ತಲೆ ಮಾಡಿ ಚಿತ್ರಹಿಂಸೆ ನೀಡಿದ್ದಾಳೆ ಎನ್ನಲಾಗಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೀವು ಪತಿ ಪತ್ನಿಗೆ ಚಿತ್ರಹಿಂಸೆ ನೀಡುವುದನ್ನು ಹೆಚ್ಚಾಗಿ ಕೇಳಿರಬಹುದು, ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನಿಗೆ ಚಿತ್ರ ಹಿಂಸೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈಕೆ ತನ್ನ ಗಂಡನಿಗೆ ನೀಡಿದ ಶಿಕ್ಷೆ ಎಷ್ಟು ಕಠೋರವಾಗಿತ್ತೆಂದರೆ ಒಂದು ಬಾರಿ ನಿಮ್ಮ ಕರುಳು ಚುರುಕ್ ಅನ್ನೋದು ಖಂಡಿತ, ಉತ್ತರ ಪ್ರದೇಶದ ಬಿಜ್ನೋರ್ದಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ಮಹಿಳೆಯೊಬ್ಬಳು ತನ್ನ ಗಂಡನಿಗೆ ಚಿತ್ರಹಿಂಸೆ ನೀಡಿ, ಆತನ ಖಾಸಗಿ ಭಾಗಗಳಿಗೆ ಹಾನಿ ಮಾಡಿದ್ದಾಳೆ. ಪತಿಯನ್ನು ಬೆತ್ತಲೆ ಮಾಡಿ, ಮಂಚದ ಮೇಲೆ ಮಲಗಿಸಿ, ಕೈ-ಕಾಲುಗಳನ್ನು ಕಟ್ಟಿ ಹಾಕಿ ಕ್ರೂರವಾಗಿ ನಡೆಸಿಕೊಂಡಿದ್ದಾಳೆ. ಎಷ್ಟೇ ಕಿರುಚಿದರು, ಬೇಡಿಕೊಂಡರು, ಮನುಷ್ಯತ್ವವಿಲ್ಲದಂತೆ ಕಾಟ ನೀಡಿದ್ದಾಳೆ. ಪತಿಯನ್ನು ಮಂಚಕ್ಕೆ ಕಟ್ಟಿ ಹಾಕಿ, ಅವಳಿಗೆ ಹೇಗೆ ಬೇಕು ಹಾಗೆ ನಡೆಸಿಕೊಳ್ಳುತ್ತಿದ್ದಳು, ಮಂಚದಲ್ಲಿ ಅವನ ಜತೆಗೆ ಮಲಗುವುದು, ಸಿಗರೇಟ್ ಸೇದುತ್ತಿದ್ದಳು, ಮದ್ಯಪಾನ ಕೂಡ ಮಾಡುತ್ತಿದ್ದಳು, ಇದರ ಮಧ್ಯೆ ಪತಿಗೆ ಚಿತ್ರಹಿಂಸೆ ಕೂಡ ನೀಡುತ್ತಿದ್ದಳು ಎಂದು ಹೇಳಲಾಗಿದೆ. ಪತಿಯ ಖಾಸಗಿ ಭಾಗಕ್ಕೆ ಮುಟ್ಟಿ ಚಿತ್ರಹಿಂಸೆಯನ್ನು ನೀಡುತ್ತಿದ್ದಳು. ಇದರಿಂದ ಸಮಾಧಾನವಾಗದಿದ್ದಾಗ ಪತಿಯ ಖಾಸಗಿ ಅಂಗದ ಮೇಲೆ ಚಾಕುವಿನಿಂದ ಗಾಯ ಮಾಡುತ್ತಿದ್ದಳು ಎಂದು ಪೊಲೀಸರು ಮುಂದೆ ಆತ ಹೇಳಿಕೊಂಡಿದ್ದಾನೆ.
ಘಟನೆಯನ್ನು ಕೇಳಿಸಿಕೊಂಡ ಪೊಲೀಸರಿಗೂ ಒಂದು ಬಾರಿ ಅಚ್ಚರಿ ಹಾಗೂ ಅಘಾತವಾಗಿದೆ. ಆಕೆ ಹಿಂಸೆ ನೀಡಿದ್ದಳು ಎಂಬುದಕ್ಕೆ ಸಿಸಿಟಿವಿಯಲ್ಲೂ ಕೂಡ ಸಾಕ್ಷಿ ದೊರಕಿಗೆ. ದೂರು ದಾಖಲಿಸಿಕೊಂಡಿದ್ದು, ಆಕೆಯನ್ನು ಬಂಧಿಸಲಾಗಿದೆ. ಇವರಿಬ್ಬರದ್ದು ಪ್ರೇಮ ವಿವಾಹ ಎಂದು ಹೇಳಲಾಗಿದೆ. ಇಬ್ಬರ ಕುಟುಂಬ ಒಪ್ಪಿಗೆಯ ನಂತರ ಮುಸ್ಲಿಂ ಪದ್ಧತಿಯಂತೆ 17 ನವೆಂಬರ್ 2023 ರಂದು ವಿವಾಹವಾಗಿದ್ದಾರೆ. ಆತನ ತಾಯಿ ಕೂಡ ತನ್ನ ಸೊಸೆ ನೀಡುತ್ತಿದ್ದ ಚಿತ್ರಹಿಂಸೆಯ ಬಗ್ಗೆ ಪೊಲೀಸರಿಗೆ ಹೇಳಿದ್ದಾರೆ. ಮಲಗುವ ಕೋಣೆಯಲ್ಲಿ ಅವನೊಂದಿಗೆ ಅಸಹ್ಯಕರ ಕೆಲಸಗಳನ್ನು ಮಾಡುತ್ತಿದ್ದಳು.ಇದರಿಂದ ನೊಂದು ಮಗ ಮಲಗುವ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಸೊಸೆಯ ದುಷ್ಕೃತ್ಯ ಬಯಲಿಗೆಳೆದಿದ್ದಾಳೆ. ಎಂದು ತಾಯಿ ದೂರಿದ್ದಾರೆ.