- +91 73497 60202
- [email protected]
- November 22, 2024 10:08 PM
ನ್ಯೂಸ್ ನಾಟೌಟ್: ಇಬ್ಬರಿಗೆ 3 ಕೋಟಿ ಮೌಲ್ಯದ ಪೋರ್ಷೆ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ಪ್ರಕರಣದಲ್ಲಿ 15 ಗಂಟೆಗಳೊಳಗೆ ನ್ಯಾಯಾಲಯಅಪ್ರಾಪ್ತ ಆರೋಪಿಗೆ ಜಾಮೀನು ನೀಡಿ ಅಪಘಾತದ ಬಗ್ಗೆ ಪ್ರಬಂಧ ಬರೆಯುವಂತೆ ಷರತ್ತು ವಿದಿಸಿತ್ತು. ನಂತರ ಇದೀಗ ಪೊಲೀಸರು ಈ ಆದೇಶದ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಕೃತ್ಯ ನಡೆದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿತ್ತಾದರೂ ಆರೋಪಿ ಪ್ರಭಾವಿ ಆಗಿದ್ದರಿಂದ ನ್ಯಾಯಾಲಯವು ಅಂದೇ ವಿಚಿತ್ರ ಷರತ್ತು ವಿಧಿಸಿ ಜಾಮೀನು ನೀಡಿತ್ತು ಎನ್ನಲಾಗಿದೆ. ಆ ಷರತ್ತುಗಳೆಂದರೆ, ಅಪಘಾತದ ಕುರಿತಂತೆ 300 ಪದಗಳ ಪ್ರಬಂಧ ಬರೆಯುವುದು, 15 ದಿನಗಳ ಕಾಲ ಟ್ರಾಫಿಕ್ ಪೊಲೀಸರೊಂದಿಗೆ ಕೆಲಸ ಮಾಡುವುದು ಮತ್ತು ಆತನ ಕುಡಿತದ ಚಟ ಬಿಡಿಸಲು ಕೌನ್ಸೆಲಿಂಗ್ ಪಡೆಯುವುದು ಆಗಿತ್ತು ಎನ್ನಲಾಗಿತ್ತು. ನ್ಯಾಯಾಲಯದ ಈ ತೀರ್ಪು ವ್ಯಾಪಕ ಟ್ರೋಲ್, ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನೂ ಅಚ್ಚರಿಯ ಸಂಗತಿ ಎಂದರೆ ಇಬ್ಬರನ್ನು ಕೊಂದ ಅಪ್ರಾಪ್ತನಿಗೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಬಿರಿಯಾನಿ ಕೊಟ್ಟು ಸತ್ಕರಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದೀಗ ಈ ತೀರ್ಪಿನ ವಿರುದ್ಧ ಪೊಲೀಸರು ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆರೋಪಿ, 17 ವರ್ಷದ ಬಾಲಕನನ್ನು ವಯಸ್ಕನಂತೆ ಪರಿಗಣಿಸಲು ಬಾಂಬೆ ಹೈಕೋರ್ಟ್‌ನಿಂದ ಅನುಮತಿ ಪಡೆಯುವುದಾಗಿ ಪೊಲೀಸರು ಸೋಮವಾರ(ಮೇ.20) ಹೇಳಿದ್ದಾರೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ