ನ್ಯೂಸ್ ನಾಟೌಟ್: ಗ್ಯಾಸ್ ಟ್ಯಾಂಕರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬಂಟ್ವಾಳದ ತುಂಬೆಯ ಕಡೆಗೋಳಿ ಎಂಬಲ್ಲಿ ಮೇ.31ರಂದು ನಡೆದಿದೆ. ಮಳೆಯ ನೀರು ಮತ್ತು ವಾಹನಗಳಿಂದ ಸೋರಿಕೆಯಾಗುವ ತೈಲದಿಂದ ವಾಹನಗಳಿಗೆ ಹೆದ್ದಾರಿಗಳ್ಲಲಿ ಕೆಲವು ಕಡೆ ವೇಗವಾಗಿದ್ದಾಗ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.
ಈ ಘಟನೆಯಲ್ಲಿ ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಕಡೆಗೋಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಮೇಲೆ ಉರುಳಿಬಿದ್ದಿದೆ. ಈ ವೇಳೆ ಯಾವುದೇ ಅನಿಲ ಸೋರಿಕೆ ಆಗಿಲ್ಲ ಎನ್ನಲಾಗಿದ್ದು, ಅಗ್ನಿಶಾಮಕ ದಳ ಮತ್ತು ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.
Click 👇