ನ್ಯೂಸ್ ನಾಟೌಟ್: ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಆಟೋ ಚಾಲಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶನಿವಾರ (ಮೇ೧೧) ನಡೆದಿದೆ. ಮೃತರನ್ನು ಬಲಿಪಗುಡ್ಡೆ ಚಂದ್ರಶೇಖರ (42 ವರ್ಷ) ಎಂದು ಗುರುತಿಸಲಾಗಿದೆ.
ಮೃತರು ಕಳೆದ ಕೆಲವು ವರ್ಷಗಳಿಂದ ಸೇವಾ ನಿರತರಾಗಿ ಕೆಲಸ ಮಾಡಿದ್ದರು. ಬಳಿಕ ಕೆಲಸವನ್ನು ತೊರೆದು ಆಟೋ ಚಾಲಕರಾಗಿ ದುಡಿಯಲು ಆರಂಭಿಸಿದ್ದರು. ಎಲ್ಲರೊಂದಿಗೂ ಚೆನ್ನಾಗಿದ್ದ ಅವರು ಹಠಾತ್ ಸಾವಿಗೆ ಶರಣಾಗಿರುವುದು ಸ್ಥಳೀಯರಿಗೆ ಅಚ್ಚರಿ ಮೂಡಿಸಿದೆ. ಸಾಲದ ಪರಿಸ್ಥಿತಿಗಳಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಿದ್ದರೂ ಸಾವಿಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇವರ ಆತುರದ ನಿರ್ಧಾರದಿಂದ ಮಕ್ಕಳು, ಪತ್ನಿಯ ಬದುಕು ಈಗ ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಚಂದ್ರಶೇಖರ ಬಲಿಪಗುಡ್ಡೆ ಅವರು ಸ್ವಂತ ಜಮೀನು ಹೊಂದಿದ್ದಾರೆ. ಅಡಿಕೆ ಕೃಷಿಯೂ ಇದೆ, ಮುಂದಿನ ಎರಡು ವರ್ಷಗಳಲ್ಲಿ ಹೊಸ ಅಡಿಕೆ ಗಿಡಗಳು ಕೂಡ ಫಸಲಿಗೆ ಬರುವುದಿತ್ತು. ಇಂತಹ ಸಮಯದಲ್ಲಿ ಅವರು ಆತ್ಮಹತ್ಯೆ ಏಕೆ ಮಾಡಿಕೊಂಡರು ಅನ್ನುವುದು ಯಕ್ಷ ಪ್ರಶ್ನೆಯಾಗಿದೆ.