- +91 73497 60202
- [email protected]
- November 22, 2024 11:57 PM
ಮಗುವನ್ನು ಕಾರಲ್ಲೇ ಬಿಟ್ಟು ಮದುವೆಗೆ ತೆರಳಿದ ಹೆತ್ತವರು..! 3 ವರ್ಷದ ಕಂದ ಉಸಿರುಗಟ್ಟಿ ದುರಂತ ಅಂತ್ಯ..!
ನ್ಯೂಸ್ ನಾಟೌಟ್: ಮದುವೆ ಕಾರ್ಯಕ್ರಮಕ್ಕೆಂದು ಹೋಗಿದ್ದ ದಂಪತಿ ಮಗುವನ್ನು ಕಾರಿನಲ್ಲೇ ಮರೆತು ಹೋದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ಬುಧವಾರ ಸಂಜೆ(ಮೇ.15) ಈ ಘಟನೆ. 3 ವರ್ಷದ ಮಗು ಗೋರ್ವಿಕಾ ನಗರ್ ವನ್ನು ಮೃತ ಮಗುವೆಂದು ಗುರುತಿಸಲಾಗಿದೆ. ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಂದೆ ಪ್ರದೀಪ್ ನಗರ್ ತನ್ನ ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಮನೆಯವರು ಸ್ಥಳಕ್ಕೆ ಬರುತ್ತಿದ್ದಂತೆ ತಾಯಿ ಮತ್ತು ಹಿರಿಯ ಮಗಳು ಕಾರಿನಿಂದ ಹೊರಬಂದರು. ನಂತರ ಪ್ರದೀಪ್ ನಗರ್ ಕಾರು ಪಾರ್ಕ್ ಮಾಡಲು ತೆರಳಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ತಮ್ಮ ತಾಯಿಯೊಂದಿಗೆ ಒಳಗೆ ಹೋಗಿದ್ದಾರೆ ಎಂದು ಭಾವಿಸಿ, ತಂದೆ ಕಾರನ್ನು ಲಾಕ್ ಮಾಡಿ ಸಮಾರಂಭಕ್ಕೆ ತೆರಳಿದ್ದರು. ತಂದೆ ಜತೆ ಮಗಳು ಬರುತ್ತಾಳೆ ಎಂದು ತಾಯಿಯೂ ಅಂದುಕೊಂಡಿದ್ದರು. ಸುಮಾರು ಎರಡು ಗಂಟೆಗಳ ಕಾಲ, ಇಬ್ಬರೂ ವಿವಿಧ ಸಂಬಂಧಿಕರನ್ನು ಭೇಟಿಯಾದಾಗ ಅದರಲ್ಲಿ ಒಬ್ಬರು ಕಿರಿಯ ಮಗಳು ಗೋರ್ವಿಕಾ ಬಗ್ಗೆ ವಿಚಾರಿಸಿದ್ದರು. ಆಕೆ ಇಬ್ಬರೊಂದಿಗೂ ಇರಲಿಲ್ಲ, ಆಗ ಇಬ್ಬರೂ ಹುಡುಕಾಟ ಆರಂಭಿಸಿದ್ದಾರೆ, ಆಗ ಘಟನೆ ಬೆಳಕಿಗೆ ಬಂದಿದೆ. ಮದುವೆ ಮನೆಗೆ ಬಂದು ಗಂಟೆಗಳ ಬಳಿಕ ಅವರು ಗೋರ್ವಿಕಾಳನ್ನು ಹುಡುಕುತ್ತಾ ಕಾರಿನತ್ತ ಮರಳಿದ್ದರು. ಕಾರಿನ ಹಿಂಬದಿಯ ಸೀಟಿನಲ್ಲಿ ಆಕೆ ಪ್ರಜ್ಞಾಹೀನಳಾಗಿರುವುದನ್ನು ಕಂಡು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. Click 👇
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ