ನ್ಯೂಸ್ ನಾಟೌಟ್: ವಿವಾಹಿತೆಯನ್ನು ಮದುವೆ ಆಗು ಅಂತ ಪಾಗಲ್ ಪ್ರೇಮಿ ಪೀಡಿಸಿದ್ದು, ಮದುವೆ ಆಗೋದಿಲ್ಲ ಅಂದಿದ್ದಕ್ಕೆ ಆಕೆಯ ಮನೆಗೆ ಬೆಂಕಿ ಇಟ್ಟಿರುವಂತಹ ಘಟನೆ ಬೆಂಗಳೂರಿನ ಸಾರಾಯಿಪಾಳ್ಯದಲ್ಲಿ ನಡೆದಿದೆ. ಅರ್ಬಾಜ್ ಮಹಿಳೆ ಮನೆಗೆ ಬೆಂಕಿ ಇಟ್ಟ ಪಾಗಲ್ ಪ್ರೇಮಿ.
ಮಹಿಳೆಯ ದೂರದ ಸಂಬಂಧಿಯಾಗಿದ್ದ ಅರ್ಬಾಜ್, ಮದುವೆ ಆಗು ಎಂದು ಮಹಿಳೆ ಹಿಂದೆ ಬಿದ್ದಿದ್ದ. ಈ ಬಗ್ಗೆ 2 ಕುಟುಂಬದ ಹಿರಿಯರು ಬುದ್ಧಿ ಹೇಳಿದ್ದರು. ಹಿರಿಯರ ಬುದ್ಧಿಮಾತಿಗೂ ಬಗ್ಗದ ಅರ್ಬಾಜ್, ಮುಂಜಾನೆ 4 ಗಂಟೆ ಸುಮಾರಿಗೆ ಮಹಿಳೆ ಮನೆಗೆ ಬೆಂಕಿ ಹಚ್ಚಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಿದ್ದಕ್ಕೆ ಭಾರಿ ಅನಾಹುತ ತಪ್ಪಿದೆ. ಬೆಂಕಿ ಇಟ್ಟಿದ್ದರಿಂದ ಮನೆಯಲ್ಲಿದ್ದ ಬಟ್ಟೆಗಳು, ಟಿವಿ, ಫ್ರಿಡ್ಜ್ ವಸ್ತುಗಳು ಬೆಂಕಿಗಾಹುತಿ ಆಗಿವೆ ಎನ್ನಲಾಗಿದೆ. ಕೇಸ್ ದಾಖಲಿಸಿಕೊಂಡು ಅರ್ಬಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.