ನ್ಯೂಸ್ ನಾಟೌಟ್ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2024ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಆಮ್ ಆದ್ಮಿ ಪಕ್ಷ (AAP) ಗೆದ್ದರೆ ಅನುಷ್ಠಾನಕ್ಕೆ ತರುವ 10 ಗ್ಯಾರಂಟಿಗಳನ್ನು ಇಂದು ಅನಾವರಣಗೊಳಿಸಿದ್ದಾರೆ. ಉಚಿತ ವಿದ್ಯುತ್, ಆರೋಗ್ಯ ಸೌಲಭ್ಯಗಳು ಸೇರಿದಂತೆ ಹಲವು ಭರವಸೆಗಳನ್ನು ಕೇಜ್ರಿವಾಲ್ ನೀಡಿದ್ದಾರೆ.
ಉಚಿತ ವಿದ್ಯುತ್ ಗ್ಯಾರಂಟಿ: ದೇಶದಾದ್ಯಂತ ಮೊದಲ 200 ಯೂನಿಟ್ ವಿದ್ಯುತ್ ಉಚಿತದೊಂದಿಗೆ 24-ಗಂಟೆಗಳ ವಿದ್ಯುತ್ ಸರಬರಾಜು,
ಶಿಕ್ಷಣದ ಗ್ಯಾರಂಟಿ: ಎಲ್ಲರಿಗೂ ಉಚಿತ ಶಿಕ್ಷಣದ ವ್ಯವಸ್ಥೆ ಮಾಡುವ ಮತ್ತು ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳನ್ನು ಉತ್ತಮಗೊಳಿಸುವ ಭರವಸೆ.
ಆರೋಗ್ಯದ ಗ್ಯಾರಂಟಿ: ಖಾಸಗಿ ಆಸ್ಪತ್ರೆಗಳಿಗೆ ಸರಿಸಮನಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ನಿರ್ಮಿಸಲಾಗುವುದು.
ಚೀನಾದಿಂದ ಭೂ ಸ್ವಾಧೀನದ ಗ್ಯಾರಂಟಿ: ಭಾರತದ ಭೂಮಿಯನ್ನು ಚೀನಾದಿಂದ ಮುಕ್ತಗೊಳಿಸಲಾಗುವುದು, ಸೇನೆಗೆ ಮುಕ್ತ ಹಸ್ತ ನೀಡಲಾಗುವುದು.
ಅಗ್ನಿವೀರ್ ಯೋಜನೆ ಅಂತ್ಯಗೊಳ್ಳುವ ಗ್ಯಾರಂಟಿ: ನರೇಂದ್ರ ಮೋದಿ ಸರ್ಕಾರ ಆರಂಭಿಸಿದ ಅಗ್ನಿವೀರ್ ಯೋಜನೆ ರದ್ದು ಪಡಿಸಲಾಗುವುದು. MSPಯ ಗ್ಯಾರಂಟಿ: ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಅವಕಾಶ.
ದೆಹಲಿಗೆ ರಾಜ್ಯದ ಸ್ಥಾನಮಾನದ ಗ್ಯಾರಂಟಿ: ದೆಹಲಿಗೆ ಸಂಪೂರ್ಣ ರಾಜ್ಯತ್ವವನ್ನು ಖಾತ್ರಿಪಡಿಸಲಾಗುವುದು. ಉದ್ಯೋಗದ ಗ್ಯಾರಂಟಿ: ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಯೋಜನೆ.
ಭ್ರಷ್ಟಾಚಾರ ಮುಕ್ತ ಗ್ಯಾರಂಟಿ: ಭ್ರಷ್ಟರಿಗೆ ಭಾರತ ಸುರಕ್ಷಿತ ಸ್ವರ್ಗ ಎಂಬ ನೀತಿ ತೊಲಗಿ, ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಭರವಸೆ.
GST ಸರಳೀಕರಣದ ಗ್ಯಾರಂಟಿ: ಸರಕು ಮತ್ತು ಸೇವಾ ತೆರಿಗೆಯನ್ನು (GST) ಸರಳಗೊಳಿಸಲಾಗುವುದು.
ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಬಹಳ ದಿನ ಜೈಲಲ್ಲಿ ಇದ್ದ ಕಾರಣ ಹುಚ್ಚರಂತೆ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಯಸ್ಸಿನ ಆಧಾರದ ಮೇಲೆ ಟಿಕೆಟ್ ನೀಡುವ ಕುರಿತು ಬಿಜೆಪಿಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
Click 👇