ನ್ಯೂಸ್ ನಾಟೌಟ್: ಅನಧಿಕೃತ ಬೃಹತ್ ಜಾಹೀರಾತು ಫಲಕವೊಂದು ಪೆಟ್ರೋಲ್ ಪಂಪ್ ಮೇಲೆ ಬಿದ್ದು ಸಂಭವಿಸಿದ ಅವಘಡದಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದ್ದು, 74 ಜನ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳಲ್ಲಿ 35 ಜನ ಬಿಡುಗಡೆಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಪರಿಹಾರ ಕಾರ್ಯಾಚರಣೆ ಮಂಗಳವಾರ(ಮೇ.14) ಬೆಳಿಗ್ಗೆಯೂ ಮುಂದುವರೆದಿತ್ತು ಎನ್ನಲಾಗಿದೆ. ಮಧ್ಯಾಹ್ನ ಇದ್ದಕ್ಕಿದ್ದಂತೆ ದೂಳು ಸಹಿತ ಭಾರಿ ಬಿರುಗಾಳಿ ಬೀಸಿತು. ಈ ವೇಳೆ ಘಾಟ್ಕೋಪರ್ ಪ್ರದೇಶದ ಚೆಡ್ಡಾನಗರದಲ್ಲಿ 100 ಅಡಿ ಎತ್ತರದ ಜಾಹೀರಾತು ಫಲಕವು ಪೆಟ್ರೋಲ್ ಪಂಪ್ ಮೇಲೆ ಬಿದ್ದಿತ್ತು. ಸ್ಥಳದಲ್ಲಿದ್ದ, ಹಲವರು ಫಲಕದಡಿ ಸಿಲುಕಿಕೊಂಡಿದ್ದರು. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಸೋಮವಾರ(ಮೇ.13) ಪ್ರತಿಕೂಲದ ಹವಾಮಾನದಿಂದಾಗಿ 15 ವಿಮಾನಗಳನ್ನು ಬೇರೆ ನಿಲ್ದಾಣ ಗಳತ್ತ ಮಾರ್ಗ ಬದಲಾಯಿಸಲು ಸೂಚಿಸ ಲಾಯಿತು. ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯು ಸಂಜೆ 5.30ಕ್ಕೆ ಪುನರಾರಂಭಗೊಂಡಿತು ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದರು.
Click 👇