ನ್ಯೂಸ್ ನಾಟೌಟ್: ಕ್ರಿಕೆಟ್ ಪಂದ್ಯಾವಳಿಗೆ ಬ್ಯಾನರ್ ಕಟ್ಟುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸಾವಿಗೀಡಾಗಿರುವ ಘಟನೆ ಶುಕ್ರವಾರ ರಾತ್ರಿ ಮೂರ್ನಾಡು ಪೇಟೆಯಲ್ಲಿ ನಡೆದಿದೆ. ಮೃತರನ್ನು ಮೂರ್ನಾಡಿನ ಆರಿಫ್ (33) ಎಂದು ಗುರುತಿಸಲಾಗಿದೆ. ಆರಿಫ್ ಮುಸ್ಲಿಂ ಕಪ್ ಕ್ರಿಕೆಟ್ ಕೂಟಕ್ಕೆ ಬ್ಯಾನರ್ ಕಟ್ಟುತ್ತಿದ್ದರು. ಈ ವೇಳೆ ಅವರಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿದೆ. ಇವರಿದ್ದ ಅಣತಿ ದೂರದಲ್ಲಿ ಸ್ನೇಹಿತರು ಕೂಡ ಇದ್ದರು. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
- +91 73497 60202
- [email protected]
- November 23, 2024 1:29 AM