30 ವರ್ಷದ ಮಹಿಳೆಯನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ ಗ್ರೇಟ್‌ ಖಲಿ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ತನ್ನ ದಢೂತಿ ದೇಹದಿಂದಲೇ ದೇಶಾದ್ಯಂತ ಖ್ಯಾತಿ ಗಳಿಸಿರುವ, ಡಬ್ಲ್ಯೂಡಬ್ಲ್ಯೂಇನಲ್ಲಿ (WWE) ಭಾರತವನ್ನು ಪ್ರತಿನಿಧಿಸಿದ ಕುಸ್ತಿಪಟು ದಿ ಗ್ರೇಟ್‌ ಖಲಿ ವಿಶ್ವದಲ್ಲೇ ಅತಿ ಕುಬ್ಜ ಮಹಿಳೆ ಎನಿಸಿರುವ ಜ್ಯೋತಿ ಆಮ್ಗೆ (Jyoti Amge)ಯನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಮಹಾರಾಷ್ಟ್ರದವರಾದ ಜ್ಯೋತಿ ಆಮ್ಗೆ (30) ಅವರು ಕೇವಲ 2.3 ಅಡಿ ಎತ್ತರವಾಗಿದ್ದು, ಜಗತ್ತಿನಲ್ಲೇ ಅತಿ ಕುಬ್ಜ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇವರು ಗಿನ್ನಿಸ್‌ ದಾಖಲೆಗೂ ಭಾಜನರಾಗಿದ್ದಾರೆ. ಜ್ಯೋತಿ ಆಮ್ಗೆ ಹಾಗೂ ದಿ ಗ್ರೇಟ್‌ ಖಲಿ ಅವರು ಇತ್ತೀಚೆಗೆ ಭೇಟಿಯಾಗಿದ್ದು, ಗ್ರೇಟ್‌ ಖಲಿ ಅವರು ತಮಾಷೆಗಾಗಿ ಅವರನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ್ದಾರೆ. View this post on Instagram A post shared by The Great Khali (@thegreatkhali) ಆದರೆ, ತಮಾಷೆಗಾಗಿ ಒಂದೇ ಕೈಯಲ್ಲಿ ಮಗುವಿನಂತೆ ಎತ್ತಿ ಆಡಿಸಿದ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ಗ್ರೇಟ್‌ ಖಲಿ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ನಿಮ್ಮನ್ನು ನಾಗ್ಪುರಕ್ಕೆ ಕಳುಹಿಸಿಬಿಡುತ್ತೇನೆ” ಎಂದು ತಮಾಷೆ ಮಾಡಿದ್ದಾರೆ. ಇದರಿಂದ ಜ್ಯೋತಿ ಆಮ್ಗೆ ಅವರು ನಾಚಿ ನೀರಾಗಿದ್ದಾರೆ. ಆದರೆ ಹಲವರು ಬ್ಯಾಡ್ ಟಚ್ ಎಂದು ಕಾಮೆಂಟ್ ಮಾಡಿದ್ದಾರೆ. Click 👇