ನ್ಯೂಸ್ ನಾಟೌಟ್: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಎನ್ನಲಾದ ಪೆನ್ಡ್ರೈವ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ರೇವಣ್ಣ, ಪ್ರಜ್ವಲ್ ವಿರುದ್ಧ ದೂರು ನೀಡಿದ್ದ ಸಂತ್ರಸ್ತ ಮಹಿಳೆ ವಿರುದ್ಧವೇ ಆಕೆಯ ಗಂಡನ ಕುಟುಂಬಸ್ಥರು ಆಕ್ರೋಶಗೊಂಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಇಂದು(ಏಪ್ರಿಲ್ 29) ಹಾಸನದಲ್ಲಿ ಸಂತ್ರಸ್ತೆ ಗಂಡನ ತಾಯಿ ಗೌರಮ್ಮ ಶಿಲ್ಪ ಸುದ್ದಿಗೋಷ್ಠಿ ನಡೆಸಿದ್ದು, ‘5 ವರ್ಷದ ಹಿಂದೆ ಸುಮ್ನೆ ಇದ್ದು ದೂರು ನೀಡಿದ್ದಾರೆ’ ಎಂದಿದ್ದಾರೆ.
‘ಭಾವನಿ ಅಮ್ಮ ನಮ್ಮ ಕುಟುಂಬಕ್ಕೆ ತುಂಬಾ ಸಹಾಯ ಮಾಡಿದ್ದಾರೆ. ಅವರು ನಮ್ಮ ಕುಟುಂಬದ ಜೊತೆ ಇದ್ದರು. ಯಾರೋ ಹೆದರಿಸಿ ಇವರನ್ನ ಕರೆದುಕೊಂಡು ಹೋಗಿ ದೂರು ಕೊಡಿಸಿದ್ದಾರೆ. ನಾವು ಶ್ರೀರಾಮಪುರದಲ್ಲಿ ಜೊತೆ ಒಟ್ಟಿಗೆ ಇದ್ವಿ. ಚುನಾವಣೆ ಸಮಯದಲ್ಲಿ ಗೌಡರ ಮನೆಗೆ ಕಪ್ಪು ಚುಕ್ಕೆ ತರಲು ಈ ಕೆಲಸ ಮಾಡಿದ್ದಾರೆ. ಇದೆಲ್ಲ ಸುಳ್ಳು ದೂರು. ರೇವಣ್ಣ ಕುಟುಂಬ ನಮಗೆ ಸಂಬಂಧಿಕರು’ ಎಂದು ಮಹಿಳೆ ಹೇಳಿದ್ದಾರೆ. ಅಶ್ಲೀಲ ವಿಡಿಯೋ ಸಂಬಂಧ ದೂರು ನೀಡಿರುವ ಮಹಿಳೆಗೆ ಸರಿಯಿಲ್ಲ. ತುಂಬಾ ಸಾಲ ಮಾಡಿಕೊಂಡಿದ್ದರು, ಜಮೀನು ಸಹ ಮಾರಾಟ ಮಾಡಿದ್ರು ಹೆಚ್.ಡಿ.ದೇವೇಗೌಡ ಕುಟುಂಬಕ್ಕೆ ಕಪ್ಪುಚುಕ್ಕೆ ತರಲು ದೂರು ನೀಡಿದ್ದಾರೆ. ಕೆಟ್ಟ ಹೆಸರು ತರಲು ಈ ಕೆಲಸ ಮಾಡುತ್ತಿದ್ದಾರೆ. ನಮ್ಮನೆಯಿಂದ ಗೌಡರ ಕುಟುಂಬಕ್ಕೆ ಕೆಟ್ಟ ಹೆಸರು ಬರಬಾರದು. ಅ ಮಹಿಳೆ ಸುಳ್ಳು ಹೇಳುತ್ತಿದ್ದಾರೆ. ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡುತ್ತೇವೆ ಗೌಡರ ಕುಟುಂಬ ತಪ್ಪು ಮಾಡಿಲ್ಲ. ನಮ್ಮ ಕಷ್ಟ-ಸುಖವನ್ನ ಭವಾನಿ ಅಮ್ಮಾ ನೋಡಿದ್ದಾರೆ. ದೂರುದಾರರ ನಡೆತೆ ಕೂಡ ಸರಿ ಇರಲಿಲ್ಲ. ಅವರಿಗೆ ಯಾವ ದೌರ್ಜನ್ಯ ಆಗಿಲ್ಲ ಎಂದು ದೂರು ನೀಡಿದಾಕೆಯ ಅತ್ತೆ ಹೇಳಿಕೆ ನೀಡಿದ್ದಾರೆ. ಐದು ವರ್ಷದಿಂದ ಏನು ಮಾಡುತ್ತಿದ್ದರು, ಈಗ ಏಕೆ ದೂರು ನೀಡಿದ್ದಾರೆ. ಅವರು ಏನು ಮಾಡಿಲ್ಲ. ನಮಗೆ ಸಹಾಯ ಮಾಡಿದ್ದಾರೆ . ಅವರು ನಮಗೆ ಚೆನ್ನಾಗಿ ನೋಡಿಕೊಂಡಿದ್ದಾರೆ. ದೂರು ನೀಡಿರುವವರದ್ದೇ ತಪ್ಪು. ಗೌಡರ ಮನೆಗೆ ಕಪ್ಪು ಚುಕ್ಕೆ ತರಬೇಕು ಎಂದು ಈ ರೀತಿ ಮಾಡಿದ್ದಾಳೆ. ಇಷ್ಟು ವರ್ಷ ರಾಜಕೀಯ ಮಾಡಿದ್ದಾರೆ, ಯಾವುದೇ ಕಪ್ಪು ಚುಕ್ಕೆ ಇಲ್ಲ. ಭವಾನಿ ಅಕ್ಕ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ. ಮೇಡಂ, ಸಾಹೇಬ್ರು ನಮಗೆ ದೇವರಿದ್ದಂತೆ. ವಿಡಿಯೋ ಸತ್ಯದ ಬಗ್ಗೆ ಪ್ರಶ್ನಿಸಿದ ದೂರುದಾರರ ವಿರುದ್ಧದವರು ಟೆಕ್ನಾಲಜಿ ಬಳಸಿ ಏನು ಬೇಕಾದ್ರು ಮಾಡಿರಬಹುದು. ಆಕೆ ಐದು ವರ್ಷದ ಹಿಂದೆಯೇ ಮನೆ ಬಿಟ್ಟಿದ್ದಾಳೆ. ಇಂದು ಏಕೆ ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಹೆಣ್ಣಾದವಳು 5 ವರ್ಷದ ಹಿಂದೆಯೇ ಹೇಳಬೇಕಿತ್ತು ಎಂದು ದೂರುದಾರ ಸಂತ್ರಸ್ತೆ ವಿರುದ್ಧವೇ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.