ನ್ಯೂಸ್ ನಾಟೌಟ್ : ಏ.24ಕ್ಕೆ ವೀರಾಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಶ್ರೀಕ್ಷೇತ್ರ ಸೀಗೇಪಾಳ್ಯದಲ್ಲಿ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ. ಇದಕ್ಕೂ ಮೊದಲು ಏ.23ಕ್ಕೆ ಮಂಗಳವಾರ ಗೋಧೂಳಿ ಲಗ್ನದಲ್ಲಿ ಗಣಪತಿ ಪೂಜೆ, ಗಂಗೆಪೂಜೆ, ರುದ್ರಾಭಿಷೇಕ ಹೋಮ, ಪೂರ್ಣಾಹುತಿ, ಶ್ರೀ ಸ್ವಾಮಿಯವರ ವಿಶೇಷ ಅಲಂಕಾರ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ.
ರಾತ್ರಿ 10.30ಕ್ಕೆ ಶ್ರೀ ಸ್ವಾಮಿಯವರ ‘ಮೊಗ್ಗಿನ ಪಲ್ಲಕ್ಕಿ ಉತ್ಸವ’ ನಡೆಯಲಿದೆ. ಬಳಿಕ ಮ್ಯೂಸಿಕ್ ಕಿಂಗ್ ರಂಗಮುತ್ತು ಜಕ್ಕೇನಹಳ್ಳಿ , ತಬಲ ಮಾರುತಿ , ಕ್ಯಾಶಿಯೋ ಗಣೇಶ್ ತಂಡದವರಿಂದ ‘ಶ್ರೀ ಮಾರುತಿ ವಿಜಯ’ ಪೌರಾಣಿಕ ಹರಿಕಥೆ ಏರ್ಪಡಿಸಲಾಗಿದೆ. ಏ.24ಕ್ಕೆ ಬೆಳಗ್ಗೆ ಏಳು ಗಂಟೆಯಿಂದ ಗ್ರಾಮಸ್ಥರಿಂದ ಆರತಿ ಸೇವೆ, ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 11 ರಿಂದ 12ರ ತನಕ ಶ್ರೀ ದೇವಾನ್ ದೇವತೆಗಳ ಕುಟೀರ ಹಾಗೂ ಶ್ರೀ ಶಿವಲಿಂಗಸಮೇತ ವಜ್ರಾಯುಧದ ವೀರಾಂಜನೇಯ ಸ್ವಾಮಿಯ ಎಂಟನೇ ವರ್ಷದ ಬ್ರಹ್ಮರಥೋತ್ಸವವನ್ನು ಏರ್ಪಡಿಸಲಾಗಿದೆ. ಬಳಿಕ ನಾಲ್ಕು ಹಳ್ಳಿಯ ಗ್ರಾಮಸ್ಥರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿಕೊಳ್ಳಲಾಗಿದೆ.