ನ್ಯೂಸ್ ನಾಟೌಟ್: ರಜೆ ಸಿಕ್ಕಾಗ ಅಥವಾ ದಿನನಿತ್ಯದ ಜಂಜಾಟದಿಂದ ಸ್ವಲ್ಪ ದೂರ ಇರಲು ಪ್ರತಿಯೊಬ್ಬರೂ ಪ್ರವಾಸಕ್ಕೆ ತೆರಳುವುದು ಸಾಮಾನ್ಯ. ಅದರಲ್ಲೂ ಮಕ್ಕಳಿಗೆ ಈ ಬಗ್ಗೆ ತುಂಬಾ ಕ್ರೇಜ್ ಇರುತ್ತೆ.ನಾವು ನೋಡಿರದ ಊರುಗಳಿಗೆ ತೆರಳಿ ಅಲ್ಲಿನ ಬಗ್ಗೆ ಅಧ್ಯಯನ ನಡೆಸೋದು ಹಾಗೂ ಅವುಗಳನ್ನು ಕುತೂಹಲಗಳಿಂದ ನೋಡೋದು ಅಂದ್ರೆ ಎಲ್ಲಿಲ್ಲದ ಆಸಕ್ತಿ ಇರುತ್ತೆ.ಹಾಗೆಯೇ ಇಲ್ಲೊಂದು ಕುಟುಂಬ ಪ್ರವಾಸ ಹೊರಟಿದೆ. ಉತ್ತಮವಾಗಿ ರಜೆ ಕಳೆಯಬೇಕೆಂದು ಜೆನ್ನಿ ಸ್ಟೀವನ್ಸ್ ಎಂಬ ಮಹಿಳೆ ತನ್ನಿಬ್ಬರು ಮಕ್ಕಳು ಹಾಗೂ ಪತಿಯ ಜತೆಗೆ ಹಿಂದೆಂದೂ ಹೋಗದ ಊರಿಗೆ ಹೋಗಿದ್ದರು.
ವಿಶೇಷವೆಂದರೆ ಅವರು ಎರಡು ವರ್ಷಗಳ ಹಿಂದಷ್ಟೇ ಯುಕೆಯಿಂದ ಸ್ವೀಡನ್ಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಯ ಸ್ಥಳಗಳನ್ನು ನೋಡಬೇಕೆನ್ನುವ ಬಯಕೆಯಿಂದ ಹೊರಟಿದ್ದರು. ಸ್ವಲ್ಪ ದಿನಗಳವರೆಗೆ ಶಾಂತವಾಗಿರುವ ವಾತಾವರಣದಲ್ಲಿ ಇರೋಣವೆನ್ನುತ್ತಾ ನಿರ್ಜನವಾಗಿದ್ದ ಸ್ಥಳದಲ್ಲಿ ಉಳಿದುಕೊಂಡಿದ್ದರು, ಇಲ್ಲಿಯೇ ಸ್ವಲ್ಪ ದಿನ ಆರಾಮವಾಗಿರೋಣ ಎಂದುಕೊಂಡಿದ್ದರು. ಆದರೆ ಗೋಡೆಯ ಮೇಲಿನ ಆ ಒಂದು ಚಿತ್ರವನ್ನು ಕಂಡು ಕೂಡಲೇ ಗಂಟು-ಮೂಟೆ ಕಟ್ಟಿಕೊಂಡು ವಾಪಸಾಗಿದ್ದಾರೆ.ಅಷ್ಟಕ್ಕೂ ಆ ಗೋಡೆ ಮೇಲೆ ಏನಿತ್ತು?
ಜೆನ್ನಿಯ ಮಗಳು ಹಾಗೆಯೇ ಬಂಗಲೆಯೆಲ್ಲಾ ಒಂದು ಸುತ್ತು ಹಾಕಿಕೊಂಡು ಬರಬೇಕೆಂದು ಹೊರಟಿದ್ದಳು, ಆ ಬಂಗಲೆಯ ಗೋಡೆಯ ಮೇಲೆ ಆಕೆಯ ಸಹೋದರ ಅಂದರೆ ಜೆನ್ನಿಯ ಕಿರಿಯ ಮಗನ ಚಿತ್ರವು ಹೆಣ್ಣಿನ ರೂಪದಲ್ಲಿದ್ದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾಳೆ.ಕೂಡಲೇ ಆಕೆ ತಾಯಿಗೆ ವಿಷಯ ತಿಳಿಸಿದಾಗ ಜೆನ್ನಿ ಬಂದು ನೋಡಿದ್ದಾರೆ, ಹೌದು ಅಲ್ಲಿದ್ದಿದ್ದು ತನ್ನ ಮಗನ ಫೋಟೋ ಆದರೆ ಅದು ಮಾತ್ರ ಹುಡುಗಿಯ ರೂಪದಲ್ಲಿತ್ತು ಅನ್ನೋದೇ ವಿಶೇಷ.ಹಿಂದೆಂದೂ ಆ ಊರನ್ನು ನೋಡಿಯೇ ಇರದ ಕುಟುಂಬವು ಈ ಚಿತ್ರ ಕಂಡು ಹೌಹಾರಿದೆ. ತಕ್ಷಣವೇ ವಸ್ತುಗಳನ್ನು ಪ್ಯಾಕ್ ಮಾಡಿ ಅಲ್ಲಿಂದ ಹೊರಟರು. ಈ ಘಟನೆ ಕುರಿತು ಜೆನ್ನಿ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ಜನರು ಕೂಡಲೇ ಅಲ್ಲಿಂದ ಹೊರಡುವಂತೆ ಸಲಹೆ ನೀಡಿದ್ದಾರೆ, ಇನ್ನೂ ಕೆಲವರು ಪುನರ್ಜನ್ಮದ ಕಥೆಯಿದ್ದಂತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಆದರೆ ಆ ಹುಡುಗನ ಫೋಟೋ ಹುಡುಗಿ ರೂಪದಲ್ಲಿ ಅಲಿ ಯಾಕೆ ಕಾಣಿಸಿಕೊಂಡಿದೆ ಅನ್ನೋದಕ್ಕೆ ಉತ್ತರವಿನ್ನೂ ಸಿಕ್ಕಿಲ್ಲ..!