ನ್ಯೂಸ್ ನಾಟೌಟ್: ಕೆವಿಜಿ ಸಮೂಹ ಶಿಕ್ಷಣಗಳ ಮಾತೃ ಸಂಸ್ಥೆಯಾಗಿ ಹೆಗ್ಗಳಿಕೆ ಪಡೆದುಕೊಂಡಿರುವ ನೆಹರೂ ಮೆಮೋರಿಯಲ್ ಕಾಲೇಜು (ಎನ್ ಎಂಸಿ) ನಲ್ಲಿ ಸೋಮವಾರ ಅದ್ಧೂರಿಯಾಗಿ ‘ಕಲೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಲೇಜಿನಲ್ಲಿ ‘ಟ್ಯಾಲೆಂಟ್ಸ್ ಡೇ ಮತ್ತು ಟ್ರೆಡಿಷನಲ್ ಡೇ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದರು. ramp walk ಕಾರ್ಯಕ್ರಮ ಎಲ್ಲರ ಮನಸನ್ನು ಗೆದ್ದಿತು. ಮಧ್ಯಾಹ್ನ ನಂತರ ಪ್ರತಿಭಾ ದಿನಾಚರಣೆ ನಡೆಯಿತು.
ಶೈಕ್ಷಣಿಕ ಸಲಹೆಗಾರ ಆಗಿರುವ ಬಾಲಚಂದ್ರ ಅವರು ತಾಸೆ ಬಡಿಯುವ ಮೂಲಕ ಈ ಕಾರ್ಯಕ್ರಮದ ಉದ್ಘಾಟನೆ ನಡೆಸಿದರು. ಪ್ರತಿಯೊಂದು ವಿಭಾಗದ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸಲಾಯಿತು. ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರು ಟೀನಾ, ಉಷಾ ದೇವಿ, ಲತಾ ಸುಪ್ರಿತ್ ಮೋಂಟಡ್ಕ ಮತ್ತಿತರರು ತೀರ್ಪುಗಾರರಾಗಿ ಭಾಗವಹಿಸಿದ್ದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಚಿನ್ನಪ್ಪ ಗೌಡ ವಿಜೇತರಿಗೆ ಬಹುಮಾನ ವಿತರಿಸಿದರು. ಕಲಾ ಪದವಿ ವಿಭಾಗ ಪ್ರಥಮ, ವಾಣಿಜ್ಯ ಪದವಿ ವಿಭಾಗ ದ್ವಿತೀಯ , ಬಿಬಿಎ ತೃತೀಯ ಸ್ಥಾನ ಪಡೆದುಕೊಂಡಿತು.