ನ್ಯೂಸ್ ನಾಟೌಟ್: ಶ್ರೀರಾಮಚಂದ್ರನ ಫೋಟೋವಿರುವ ಪೇಪರ್ ಪ್ಲೇಟ್ಗಳಲ್ಲಿ ಗ್ರಾಹಕರಿಗೆ ಉದ್ದೇಶಪೂರ್ವಕವಾಗಿ ಬಿರಿಯಾನಿ ಬಡಿಸುತ್ತಿರುವ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಅಂಗಡಿ ಮಾಲೀಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ದೆಹಲಿಯ ಜಹಾಂಗೀರ್ಪುರಿಯಲ್ಲಿರುವ ಬಿರಿಯಾನಿ ಜಾಯಿಂಟ್ನಲ್ಲಿ ಈ ಘಟನೆ ವರದಿಯಾಗಿದ್ದು, ಸದ್ಯ ಅಂಗಡಿ ಮಾಲೀಕನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಶ್ರೀರಾಮನ ಚಿತ್ರಗಳನ್ನು ಒಳಗೊಂಡ ಪೇಪರ್ ಪ್ಲೇಟ್ಗಳಲ್ಲಿ ಗ್ರಾಹಕರಿಗೆ ಬಿರಿಯಾನಿ ಹಾಕಿಕೊಡುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಎಲ್ಲೆಡೆ ಹರಿಬಿಟ್ಟಿದ್ದಾರೆ. ಬಿರಿಯಾನಿಗಾಗಿ ಅಂಗಡಿಯ ಬಳಿ ಜನರು ಗುಂಪುಗಟ್ಟಿ ಸಾಲು ಸಾಲಾಗಿ ನಿಂತಿರುವುದು ಕಾಣಬಹುದು. ಬಜರಂಗದಳದ ಸದಸ್ಯರು ತಕ್ಷಣವೇ ಅಂಗಡಿಯ ಮಾಲೀಕರಿಗೆ ಆ ಪ್ಲೇಟ್ಗಳಲ್ಲಿ ಬಿರಿಯಾನಿ ಮಾರಾಟ ಮಾಡದಂತೆ ಎಚ್ಚರಿಸಿ, ನಂತರದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ.