ನ್ಯೂಸ್ ನಾಟೌಟ್: ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ರೈ ಅವರು ಪಂಚೆ ಕಟ್ಟಿಕೊಂಡು ಭರ್ಜರಿ ಬ್ಯಾಡ್ಮಿಂಟನ್ ಆಡಿದ್ದಾರೆ.
ವರುಣ್ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ಪಡ್ಡಾಯೂರಿನಲ್ಲಿ ನಿರ್ಮಾಣಗೊಂಡಿರುವ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ಅನ್ನು ಶಾಸಕರು ಉದ್ಘಾಟಿಸಿದರು. ಈ ವೇಳೆ ಆಕರ್ಷಕ ಸರ್ವೀಸ್ , ಕಟ್ ಶಾಟ್ ಮೂಲಕ ಗಮನ ಸೆಳೆದರು.
ರಾಜಕೀಯವಾಗಿ ಅತ್ಯದ್ಭುತ ಭಾಷಣಗಳ ಮೂಲಕ ಸದನದಲ್ಲಿ ಧ್ವನಿ ಎತ್ತಿರುವ ಶಾಸಕರು ಕ್ರೀಡಾ ಕ್ಷೇತ್ರದಲ್ಲೂ ಕೂಡ ಓರ್ವ ಚಾಂಪಿಯನ್ ಎಂದು ಅಭಿಮಾನಿಗಳು ಖುಷಿಯಿಂದ ಹೇಳಿಕೊಳ್ಳುತ್ತಿದ್ದಾರೆ.