ನ್ಯೂಸ್ ನಾಟೌಟ್: ಪತಂಜಲಿಗೆ ಹೊಡೆತದ ಮೇಲೆ ಹೊಡೆತ ಬೀಳುತ್ತಿದ್ದು, ಇತ್ತೀಚಿಗೆ ದಾರಿ ತಪ್ಪಿಸುವ ಜಾಹಿರಾತುಗಳನ್ನು ನೀಡಿ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಪತಂಜಲಿಗೆ ಇದೀಗ ಉತ್ತರಾಖಂಡ ಸರಕಾರ ಪತಂಜಲಿಯ 14 ಉತ್ಪನ್ನಗಳ ಪರವಾನಿಗೆಯನ್ನು ರದ್ದುಗೊಳಿಸುವ ಮೂಲಕ ಮತ್ತೊಂದು ಶಾಕ್ ನೀಡಿದೆ. ಉತ್ತರಾಖಂಡ ಸರ್ಕಾರವು ಸೋಮವಾರ ಎ.29 ರ ಆದೇಶದ ಮೂಲಕ ಪತಂಜಲಿಯ 14 ಉತ್ಪನ್ನಗಳ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ವರದಿ ತಿಳಿಸಿದೆ.
ಅಲ್ಲದೆ ರಾಮ್ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ವಿರುದ್ಧ ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇಬ್ಬರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ನಿಷೇಧಿತ ಉತ್ಪನ್ನಗಳಲ್ಲಿ ದಿವ್ಯಾ ಫಾರ್ಮಸಿಯ ದೃಷ್ಟಿ ಐ ಡ್ರಾಪ್, ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಲೆಹ್, ಮುಕ್ತಾ ವತಿ ಎಕ್ಸ್ಟ್ರಾ ಪವರ್, ಲಿಪಿಡಮ್, ಬಿಪಿ ಗ್ರಿಟ್, ಮಧುಗ್ರಿಟ್, ಮಧುನಾಶಿನಿ ವಟಿ ಎಕ್ಸ್ಟ್ರಾ ಪವರ್, ಲಿವಾಮೃತ್ ಅಡ್ವಾನ್ಸ್, ಲಿವೋಗ್ರಿಟ್ ಉತ್ಪನ್ನಗಳು ಸೇರಿವೆ ಎನ್ನಲಾಗಿದೆ. ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿಯ ದಿವ್ಯ ಫಾರ್ಮಸಿ ತಯಾರಿಸಿದ 14 ಉತ್ಪನ್ನಗಳ ಪರವಾನಗಿಯನ್ನು ಅಮಾನತುಗೊಳಿಸಿರುವುದಾಗಿ ಸರ್ಕಾರಿ ಪರವಾನಗಿ ಸಂಸ್ಥೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ. ಜನರ ದಾರಿ ತಪ್ಪಿಸುವ ಜಾಹಿರಾತುಗಳನ್ನು ನೀಡಿರುವ ಕುರಿತು ವಿವಿಧ ಕಂಪೆನಿಗಳು ನೀಡಿರುವ ದೂರುಗಳ ಆದರದ ಮೇಲೆ ಈ ಆದೇಶವನ್ನು ಹೊರಡಿಸಿದೆ ಎನ್ನಲಾಗಿದೆ.