ನ್ಯೂಸ್ ನಾಟೌಟ್: ನೆಹರೂ ಮೆಮೋರಿಯಲ್ ಕಾಲೇಜು (NMC ) ಸುಳ್ಯ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿನ ಸ್ವರ್ಗವಾಗಿದೆ. ಅಗ್ಗದ ದರದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದು ಸುಲಭದ ಮಾತಲ್ಲ. ಆದರೆ ದಿವಂಗತ ಕುರುಂಜಿ ವೆಂಕಟರಮಣ ಗೌಡರ ಕನಸನ್ನು ಅವರ ಹೆಮ್ಮೆಯ ಪುತ್ರ ಹಾಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ| ಚಿದಾನಂದ ಕೆ.ವಿ ಇಲ್ಲಿ ತನಕ ನನಸಾಗಿಸಿಕೊಂಡೇ ಬಂದಿದ್ದಾರೆ.
ಇಂದು ಎಲ್ಲದಕ್ಕೂ ಮಾರುಕಟ್ಟೆಯಲ್ಲಿ ದರ ಹೆಚ್ಚುತ್ತಿದೆ. ಆದರೆ ಡಾ| ಚಿದಾನಂದ ಕೆ.ವಿ ಅವರು ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ. ತಂದೆಯ ಆಸೆಯಂತೆಯೇ ಕಡಿಮೆ ಫೀಸ್ ತೆಗೆದುಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಒಟ್ಟಾರೆಯಾಗಿ ನೋಡುವುದಾದರೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಗುಣಮಟ್ಟದ ಪದವಿ ಶಿಕ್ಷಣ ಕಲಿಕೆಗೆ ಸೂಕ್ತವಾದ ವಿದ್ಯಾ ಕೇಂದ್ರವಾಗಿದೆ. ಕಳೆದ 48 ವರ್ಷಗಳಿಂದ ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಅಕ್ಷರ ಧಾಮವಾಗಿರುವ ಈ ವಿದ್ಯಾಕೇಂದ್ರ ಇದೀಗ 2024-25ನೇ ಸಾಲಿನ ಪ್ರವೇಶಾತಿಯನ್ನು ಆರಂಭ ಮಾಡಿದೆ. ಸದ್ಯ ವೃತ್ತಿಪರವಾದ ಆರು ಪದವಿ ಕೋರ್ಸ್ ಗಳನ್ನು ನೆಹರೂ ಮೆಮೋರಿಯಲ್ ಕಾಲೇಜು ಹೊಂದಿದೆ. ಪಿಯುಸಿ ಪಾಸ್ ಆದ ಬಳಿಕ ಪದವಿ ಅಧ್ಯಯನವು ಮೂರು ವರ್ಷದ ಕೋರ್ಸ್ ಆಗಿರುತ್ತದೆ.
ನೆಹರೂ ಮೆಮೋರಿಯಲ್ ಕಾಲೇಜಿನ ಪದವಿ ವಿಭಾಗದಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಎಸ್ ಡಬ್ಲ್ಯು ಹಾಗೂ ಬಿಸಿಎ ಸೇರಿದಂತೆ ಒಟ್ಟು ಆರು ಕೋರ್ಸ್ ಲಭ್ಯವಿದೆ. ಪದವಿ ಅಧ್ಯಯನ ಜೊತೆಗೆ ವಿದ್ಯಾರ್ಥಿಗಳ ಬದುಕನ್ನು ರೂಪಿಸಬಲ್ಲ ಕೌಶಲ್ಯಯುತ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ. ಮಾತ್ರವಲ್ಲ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರುವವರಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಮಾತ್ರವಲ್ಲ ಸಾಂಸ್ಕೃತಿಕ ಸಂಘದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಎನ್ ಸಿಸಿ, ಎನ್ ಎಸ್ ಎಸ್, ರೇಂಜ್ ಅಂಡ್ ರೋವರ್ಸ್ , ನೇಚರ್ ಕ್ಲಬ್ , ಸೋಷಿಯಲ್ ವರ್ಕ್ ಫೋರಂ, ವಿಜ್ಞಾನ ಸಂಘ, ಕನ್ನಡ ಸಂಘ, ವಾಣಿಜ್ಯ ಸಂಘ, ರೆಡ್ ಕ್ರಾಸ್, ವ್ಯವಹಾರ ನಿರ್ವಹಣಾ ಸಂಘ ಸೇರಿದಂತೆ ಇನ್ನಿತರ ಸಂಘಗಳ ಮೂಲಕ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಉಚಿತ ಜಿಮ್, ವಿಶಾಲ ಗ್ರಂಥಾಲಯ (ಅತ್ಯಧಿಕ ಹೆಚ್ಚು ಪುಸ್ತಕ ಸಂಗ್ರಹ), ಪ್ರಯೋಗಾಲಯ, ಹಾಸ್ಟೇಲ್ ಸೌಲಭ್ಯ, ಕ್ರೀಡಾ-ಸಾಂಸ್ಕೃತಿಕ ಪ್ರತಿಭೆಗಳಿಗೆ ಉಚಿತ ಶಿಕ್ಷಣ, ಅಗತ್ಯ ಸ್ಥಳಗಳಿಗೆ ಬಸ್ ಸೌಲಭ್ಯ, ಕಂಪ್ಯೂಟರ್ ಲ್ಯಾಬ್ ವಿತ್ ಹೈಸ್ಪೀಡ್ ಇಂಟರ್ ನೆಟ್ ಸೌಲಭ್ಯ, ಪ್ರಾಜೆಕ್ಟರ್, ಕ್ಯಾಂಪಸ್ ಒಳಗೆ ಎಟಿಎಂ, ಬ್ಯಾಂಕ್, ಪೋಸ್ಟ್ ಆಫೀಸ್ , ಕ್ಯಾಂಟೀನ್, ವೈದ್ಯಕೀಯ ಸೌಲಭ್ಯ, ವಿಶಾಲವಾದ ಆಟದ ಮೈದಾನ ಇನ್ನಿತರ ಹಲವಾರು ಸೌಲಭ್ಯಗಳು ಲಭ್ಯವಿದೆ. ಈ ಹಿಂದೆ NMC ನಲ್ಲಿ ಕಲಿತ ವಿದ್ಯಾರ್ಥಿಗಳು ಹಲವಾರು ಮಂದಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಖಾಸಗಿ ಉದ್ಯೋಗದಲ್ಲೂ ಹಲವು ಮಂದಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಮಾತ್ರವಲ್ಲ ಮತ್ತೆ ಕೆಲವರು ವಿವಿಧ ವಿಭಾಗದಲ್ಲಿ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಅತ್ಯಧಿಕ ಅಂಕ ಪಡೆದು ಮಂಗಳೂರು ವಿವಿ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. NAAC ಸಂಸ್ಥೆಯಿಂದ B++ ಮಾನ್ಯತೆ ಪಡೆದುಕೊಂಡಿರುವ NMC ಯಲ್ಲಿ ಇದೀಗ ವಿದ್ಯಾರ್ಥಿಗಳಿಗೆ ಕಲಿಯುವುದಕ್ಕೆ ಅವಕಾಶದ ಬಾಗಿಲನ್ನೇ ತೆರೆಯಲಾಗಿದೆ. ಆಸಕ್ತ ವಿದ್ಯಾರ್ಥಿಗಳು 08257-230331, 233331 ಅಥವಾ ಮೊಬೈಲ್ ಸಂಖ್ಯೆ 7353756487, 8762540751 ಸಂಪರ್ಕಿಸಬಹುದಾಗಿದೆ.