ನ್ಯೂಸ್ ನಾಟೌಟ್:ಕೈಯಲ್ಲಿ ಫೋನ್ ಇದ್ದರೆ ಸಾಕು, ಒಂದು ಕ್ಷಣ ಹೊರ ಪ್ರಪಂಚದಲ್ಲಿ ಏನಾಗುತ್ತಿದೆ ಅನ್ನೋದೇ ಗೋತ್ತಾಗಲ್ಲ.ಫೋನ್ ಅನ್ನು ಎಷ್ಟು ಬೇಕೋ ಅಷ್ಟೇ ಉಪಯೋಗ ಮಾಡಿಕೊಳ್ಳಬೇಕೆ ವಿನಃ ಅದನ್ನ ಮಂಗನ ಕೈಗೆ ಸಿಕ್ಕ ಮಾಣಿಕ್ಯ ಅಂತ ತಿಳ್ಕೊಳ್ಳಲೇ ಬಾರದು. ಇಲ್ಲೊಬ್ಬಳು ಮಹಿಳೆ ಫೋನಲ್ಲಿ ಮಾತನಾಡುತ್ತಾ ಮಗುವನ್ನು ಪ್ರಿಜ್ನಲ್ಲಿಟ್ಟ ಪ್ರಸಂಗವೊಂದು ನಡೆದಿದೆ.
ಮನೆಯಲ್ಲಿ ತಾಯಿಯೊಬ್ಬರು ಫೋನಿನಲ್ಲಿ ಮಾತನಾಡುತ್ತಿದ್ದಾಗ ಮಗು ತನ್ನ ಪಾಡಿಗೆ ಆಟವಾಡುತ್ತಾ ಇತ್ತು. ಸ್ವಲ್ಪ ಸಮಯದ ನಂತರ ಅವಳು ಫೋನಲ್ಲಿ ಮಾತನಾಡುತ್ತಲೇ ತರಕಾರಿಗಳನ್ನು ಕತ್ತರಿಸುತ್ತಾಳೆ. ಹೀಗೆ ತರಕಾರಿ ಇರುವ ಬುಟ್ಟಿ ಎಂದು ಭಾವಿಸಿ ಮಗುವನ್ನು ತೆಗೆದುಕೊಂಡು ಹೋಗಿ ಫ್ರಿಡ್ಜ್ ನಲ್ಲಿಟ್ಟ ಪ್ರಸಂಗ ನಡೆದಿದ್ದು ಬೆಚ್ಚಿ ಬೀಳಿಸುವಂತಿದೆ.
ನಂತರ ಫೋನಿನಲ್ಲಿ ಮಾತನಾಡುತ್ತಾ ಅಡುಗೆ ಕೋಣೆಗೆ ಹೋದಳು.ಸ್ವಲ್ಪ ಹೊತ್ತಿನ ನಂತರ ಗಂಡ ಮನೆಗೆ ಬಂದು ಮಗು ಚೆನ್ನಾಗಿದೆಯಾ? ಎಂದು ಕೇಳಿದಾಗ ಅವನು ಇಲ್ಲಿ ಆಡುತ್ತಿರುವುದನ್ನು ನೋಡಿದೆ ಎಂದಳು.ಆದರೆ ಮಗು ಕಾಣಿಸಲಿಲ್ಲ, ಇಬ್ಬರು ಮಗುವಿಗಾಗಿ ಹುಡುಕಾಡಿದ್ದಾರೆ. ಮಗುವಿನ ಅಳು ಫ್ರಿಡ್ಜ್ನ ಒಳಗಿಂದ ಕೇಳಿ ಬರುತ್ತದೆ.ಫ್ರಿಡ್ಜ್ನ ಬಾಗಿಲು ತೆರೆದು ನೋಡಿದಾಗ ಒಳಗೆ ಮಗು ಇದೆ.ಆಮೇಲೆ ಯಾಕೆ ಹಾಗೆ ಮಾಡಿದೆ? ಎಂದು ಕೇಳಿದಾಗ ಮಹಿಳೆ ಕಣ್ಣೀರು ಹಾಕುತ್ತಾ ಮಗುವನ್ನು ಎತ್ತಿಕೊಂಡಿದ್ದಾಳೆ. x ನಲ್ಲಿ ಈ ವೀಡಿಯೊ ವೈರಲ್ ಆಗಿದೆ.ಪೋಸ್ಟ್ ಮಾಡಿದ ವ್ಯಕ್ತಿಯಿಂದ ಅಪಾಯಕಾರಿ ಚಟ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋ ನೋಡಿದ ನೆಟಿಜನ್ಗಳಲ್ಲಿ ಹಲವರು ಫೋನ್ನಲ್ಲಿ ಮಾತನಾಡುತ್ತಲೇ ಕಾಮೆಂಟ್ ಮಾಡುತ್ತಿದ್ದಾರೆ. ಇದು ನಿಜವಾದ ವಿಡಿಯೋ ಅಲ್ಲ..ಇದೆಲ್ಲ ನಾಟಕ ಎಂಬ ವಾದವಿದೆ. ಇದು ಡ್ರಾಮಾ ವಿಡಿಯೋ ಎಂದು ನನಗನ್ನಿಸುತ್ತದೆ.ಏನೇ ಆಗಿರಲಿ ಮೊಬೈಲ್ನಲ್ಲಿ ಮಾತನಾಡುವಾಗ ಇಂತಹ ಕೆಲಸದಿಂದ ಬೇರೆಯವರ ಪ್ರಾಣಕ್ಕೆ ಕುತ್ತು ತರುತ್ತದೆ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂಬ ಸಂದೇಶವನ್ನು ಸಾರುತ್ತದೆ.