ನ್ಯೂಸ್ ನಾಟೌಟ್: ಪೂರ್ತಿ ರಷ್ ಆದ ಬಸ್ನಲ್ಲಿ ಮಹಿಳೆಯರಿಬ್ಬರು ಸೀಟ್ ಸಿಗದೆ ಮಗುವನ್ನು ಲಗೇಜ್ ಕ್ಯಾರಿಯರ್ನಲ್ಲಿ ಮಲಗಿಸಿದ ಘಟನೆ ಇಂದು(ಎ.೮) ವರದಿಯಾಗಿದೆ. ಸೋಮವಾರ ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾಯಚೂರಲ್ಲಿ ಬಹುತೇಕ ಸರಕಾರಿ ಬಸ್ಗಳು ಫುಲ್ ರಶ್ ಆಗಿವೆ. ಹೀಗಾಗಿ ಸೀಟು ಸಿಗದೆ ತಾಯಿಯೊಬ್ಬರು ಲಗೇಜು ಸಮೇತ ಮಗುವನ್ನು ಕ್ಯಾರಿಯರ್ನಲ್ಲಿ ಮಲಗಿಸಿದ್ದರು.
ಲಿಂಗಸಗೂರು-ಕಲಬುರಗಿ ಮಾರ್ಗದ ಬಸ್ನಲ್ಲಿ ಈ ಘಟನೆ ನಡೆದಿದೆ. ಇನ್ನೂ ಬಸ್ ಹತ್ತಿ ಒಳಗೆ ಬಂದವರೆಲ್ಲರೂ ತಾಯಿಯ ಐಡಿಯಾ ಕಂಡು ಫಿದಾ ಆಗಿದ್ದರು. ತಮ್ಮ ಕೈಯಲ್ಲಿದ್ದ ಮೊಬೈಲ್ ಹಿಡಿದು ವಿಡಿಯೊ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಲಿಂಗಸಗೂರು-ಕಲಬುರಗಿ ಮಾರ್ಗದ ಬಸ್ ಪ್ರಯಾಣಿಕರಿಂದ ತುಂಬಿ ಹೋಗಿತ್ತು.
ಉಸಿರಾಡಲು ಕಷ್ಟ ಎಂಬಂತೆ ಪ್ರಯಾಣಿಕರಿಂದ ತುಂಬಿ ತುಳುಕುತಿತ್ತು. ಇದರೊಟ್ಟಿಗೆ ಬಿಸಿಲನಾಡು ಎನ್ನಿಸಿಕೊಂಡಿರುವ ರಾಯಚೂರಿನಲ್ಲಿ ತಾಪಮಾನ ಏರಿಕೆ ಆಗುತ್ತಲೇ ಇದೆ. ಸೀಟ್ ಸಿಗದೆ ನಿಂತಿದ್ದ ಮಹಿಳೆಯೊಬ್ಬರು, ಮಗುವನ್ನು ಹಿಡಿದುಕೊಂಡು ಪ್ರಯಾಣಿಸುವುದು ಕಷ್ಟ ಎಂಬುದು ಅರಿವಿಗೆ ಬಂದಿದೆ. ಹೀಗಾಗಿ ಕೈಯಲ್ಲಿದ್ದ ಲಗೇಜ್ಗಳನ್ನು ಕ್ಯಾರಿಯರ್ನಲ್ಲಿ ಹಾಕಿ, ಮಗುವನ್ನು ಮಲಗಿಸಿದ್ದಾರೆ ಎನ್ನಲಾಗಿದೆ.