ನ್ಯೂಸ್ ನಾಟೌಟ್: ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ 50ಕ್ಕೂ ಅಧಿಕ ಮಂದಿ ಹಿಂದೂ ಕಾರ್ಯಕರ್ತ ತಂಡವೊಂದು ಲಾರಿ ಚಾಲಕನಿಗೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ರವಿವಾರ(ಎ.21) ರಾತ್ರಿ ನಡೆದಿದೆ.
ಮಹಾರಾಷ್ಟ್ರದಿಂದ ಹುಬ್ಬಳ್ಳಿ ಕಡೆ ಹೊರಟ್ಟಿದ್ದ ಲಾರಿಯನ್ನು ನಗರದ ಸುವರ್ಣಸೌಧದ ಮುಂಭಾಗದ ಹೆದ್ದಾರಿಯಲ್ಲಿ ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಚಾಲಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಲಾರಿ ಚಾಲಕನನ್ನು ಕಾಸರಗೋಡು ಮೂಲದ ಉಮರ್ ಎಂದು ತಿಳಿದು ಬಂದಿದ್ದು, ಮತ್ತೋರ್ವ ಲಾರಿ ಚಾಲಕ ಸುನೀಲ್ ಕುಮಾರ್ಗೂ ಗಾಯವಾಗಿದೆ. ಗಂಭೀರವಾಗಿ ಗಾಯಗೊಂಡ ಲಾರಿ ಚಾಲಕನಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.