ನ್ಯೂಸ್ ನಾಟೌಟ್: ಮೇ2ರಂದು ಭಾಗಮಂಡಲ, ಸಂಪಾಜೆ ಮತ್ತು ಮೇಕೇರಿ ಫೀಡರ್ ನ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಇರುವುದರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಇದು ಮಡಿಕೇರಿ 66/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಪವರ್ ಸಪ್ಲೈ ಮಾಡುವ ಲೈನ್ ಆಗಿರುತ್ತದೆ. ಮಳೆಗಾಲದ ಪೂರ್ವ ನಿರ್ವಹಣೆಯಾಗಿದೆ ಅನ್ನೋದು ವಿಶೇಷ. ತಾಳತ್ತಮನೆ, ಸಂಪಾಜೆ, ಚೆಂಬು, ಬೆಟ್ಟಗೇರಿ, ಚೇರಂಬಾಣೆ, ಭಾಗಮಂಡಲ, ಕಡಗದಾಳು, ಹಾಕತ್ತೂರು ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವೆತ್ಯಯವಾಗಲಿದೆ ಎಂದು ತಿಳಿದು ಬಂದಿದೆ.