ನ್ಯೂಸ್ ನಾಟೌಟ್: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಾಲ ಗರ್ಭಿಣಿಯರ (Pregnancy) ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡಿದೆ. ತಾಯ್ತನದ ವಯಸ್ಸಿಗೂ ಮೊದಲೇ ರಾಜ್ಯದಲ್ಲಿ ಬಾಲ ಗರ್ಭಿಣಿಯರು ಏರಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರು ಕಂಡು ಬಂದ ಹಿನ್ನಲೆ ಸಿಎಂ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಆರೋಗ್ಯ ಇಲಾಖೆ (Health Department) , ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದ್ದಂತೆ ಎಲ್ಲಾ ಇಲಾಖೆಗಳಿಗೂ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಕೆಲವು ತಂದೆ ತಾಯಿಗಳಿಗೆ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಬೇಕು ಅನ್ನೋ ಭಾವನೆ ಇರುತ್ತೆ. ಇನ್ನು ಕೆಲವರಿಗೆ ಶಿಕ್ಷಣದ ಕೊರತೆ, ಮೂಢನಂಬಿಕೆಗಳಿಂದಲೂ ಕೆಲವು ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ. ಇನ್ನು ಕೇಲವು ದೌರ್ಜನ್ಯ ಹಾಗೂ ಪ್ರೇಮ ಪ್ರಕರಣಗಳ ಕಾರಣದಿಂದಲೂ ಬಾಲ ಗರ್ಭಿಣಿಯರು ಸಂಖ್ಯೆ ಏರಿಕೆಗೆ ಕಾರಣವಾಗುತ್ತಿದ್ದು, ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ 18 ವರ್ಷ ತುಂಬುವುದಕ್ಕಿಂತಾ ಮೊದಲು ಗರ್ಭಿಣಿ ಆಗುತ್ತಿದ್ದು ಬಾಲಕಿಯರು ಹಲವು ದೈಹಿಕ ಮಾನಸಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಅಂದರೆ 28,657 ಬಾಲ ಗರ್ಭಿಣಿಯರು ಕಂಡು ಬಂದ ಹಿನ್ನಲೆ ಸಿಎಂ ಎಚ್ಚರಿಕೆಯ ಗಂಟೆ ನೀಡಿದ್ದಾರೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದ್ದಂತೆ ಹತ್ತು ಇಲಾಖೆಗೆ ಚಾಟಿ ಬೀಸಿರುವ ಸಿಎಂ, ಎಲ್ಲಾ ಇಲಾಖೆಗಳು ತುರ್ತಾಗಿ ಈ ಬಗ್ಗೆ ವರದಿ ನೀಡಿ ಕ್ರಮಕ್ಕೆ ಮುಂದಾಗುವಂತೆ ಸಿಎಂ ಸಿದ್ಧರಾಮಯ್ಯ ಚಾಟಿ ಬೀಸಿದ್ದಾರೆ. ಲವ್ ಮ್ಯಾರೇಜ್, ಬಾಲ್ಯ ವಿವಾಹ, ಇನ್ ರಿಲೇಶನ್ ಶಿಫ್, ಲೈಂ* ಗಿಕ ದೌರ್ಜನ್ಯ, ಲೈಂಗಿ* ಕ ತಿಳವಳಿಕೆ ಕೊರತೆ ಹಿನ್ನಲೆ ಜೀವನ ಶೈಲಿ ಸೇರಿದ್ದಂತೆ ನಾನಾ ಕಾರಣಗಳಿಂದ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ ಬಾಲ ಗರ್ಭಿಣಿಯರು ಸಂಖ್ಯೆ 28,657 ಕ್ಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್ ಪ್ರಕಾರ 2023 ಜನೇವರಿಯಿಂದ ನವೆಂಬರ್ ತಿಂಗಳವರೆಗೆ ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರು ಕಂಡು ಬಂದಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಫುರ್ವ ಮೆಟ್ರಿಕ್ ಹಾಸ್ಟೆಲ್ ವಿದ್ಯಾರ್ಥಿನಿ ಪ್ರಕರಣ ಬಳಿಕ ಸರ್ಕಾರ ಅಲರ್ಟ್ ಆಗಿದ್ದು, ನಿರಂತರವಾಗಿ ಏರಿಕೆಯಾಗ್ತೀರೊ ಬಾಲ ಗರ್ಣಿಯರ ಸಂಖ್ಯೆ ತಡೆಯಲು ಮುಂದಾಗಿದೆ ಎಂದು ವರದಿ ತಿಳಿಸಿದೆ.