ನ್ಯೂಸ್ ನಾಟೌಟ್: ಮರುದಿನ ಹಸೆಮಣೆ ಏರಬೇಕಿದ್ದ ವರನೋರ್ವ ಮದುವೆಯ ಮೊದಲ ಹಳದಿ ಶಾಸ್ತ್ರ ನಡೆಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಹಲೋಕ ತ್ಯಜಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಕೋಟಾ ನಗರದ ನಂಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ(ಎ.೨೪) ನಡೆದಿದೆ. ಮೃತ ವ್ಯಕ್ತಿಯನ್ನು ಮೂಲತಃ ಕೋಟಾ ನಗರದ ಕೇಶವಪುರ ನಿವಾಸಿಯಾದ ಸೂರಜ್ ಸಕ್ಸೇನಾ (30) ಎಂದು ಗುರುತಿಸಲಾಗಿದೆ.
ಕೋಟಾ ನಗರದ ಕೇಶವಪುರ ನಿವಾಸಿಯಾದ ಸೂರಜ್ ಸಕ್ಸೇನಾ ವಿವಾಹ ಏಪ್ರಿಲ್ 24 ರಂದು ಮದುವೆ ನಿಶ್ಚಯವಾಗಿತ್ತು ಅದರಂತೆ ಬುಧವಾರ ಬಂಡಿ ರಸ್ತೆಯಲ್ಲಿರುವ ಮೆನಾಲ್ ರೆಸಿಡೆನ್ಸಿ ರೆಸಾರ್ಟ್ನಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿತ್ತು, ಈ ಶುಭ ಕಾರ್ಯಕ್ರಮಕ್ಕೆ ಎಲ್ಲ ಸಿದ್ದತೆಗಳು ನಡೆದಿತ್ತು ಅದರಂತೆ ಸೋಮವಾರ ಮದುವೆಯ ಮೊದಲ ಶಾಸ್ತ್ರವಾದ ಹಳದಿ ಶಾಸ್ತ್ರ ನಡೆಯುತ್ತಿತ್ತು ಈ ವೇಳೆ ಹಳದಿ ಸಂಭ್ರಮದಲ್ಲಿದ್ದ ವರ ಅಲ್ಲೇ ಇದ್ದ ಈಜುಕೊಳದ ಬಳಿ ನಡೆದುಕೊಂಡು ಹೋಗಿದ್ದಾಗ ಅಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದ ಕಬ್ಬಿಣದ ಕಂಬವನ್ನು ಮುಟ್ಟಿದ್ದಾನೆ ಈ ವೇಳೆ ಆತನಿಗೆ ಒಮ್ಮೆಲೇ ವಿದ್ಯುತ್ ಶಾಕ್ ಹೊಡೆದು ಕುಸಿದು ಬಿದ್ದಿದ್ದಾನೆ ಇದನ್ನು ಕಂಡ ಅಲ್ಲಿದ್ದವರು ಓಡಿ ಬಂದು ಸೂರಜ್ ನನ್ನು ಉಪಚರಿಸಿದ್ದಾರೆ.
ಆದರೆ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಸೂರಜ್ ಪ್ರಜ್ಞೆ ತಪ್ಪಿದ್ದ ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿತಾದರೂ ಅಷ್ಟೋತ್ತಿಗಾಗಲೇ ಸೂರಜ್ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಇತ್ತ ಸೂರಜ್ ಮೃತಪಟ್ಟ ವಿಚಾರ ತಿಳಿಯುತ್ತಲೇ ಕುಟುಂಬದಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ ಅಷ್ಟು ಮಾತ್ರವಲ್ಲದೆ ವಧುವಿನ ಮನೆಯಲ್ಲೂ ನೀರವ ಮೌನ ಆವರಿಸಿದೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.