ನ್ಯೂಸ್ ನಾಟೌಟ್: ಕೆಲವು ದಿನಗಳಿಂದ ಭಾರತ ವಿರೋಧಿ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳ ಗುಂಡಿಗೆ ಬಲಿಯಾಗುತ್ತಿದ್ದಾರೆ ಮತ್ತು ಹಿಂದೆ ಕೆನೆಡಾದ ನೆಲದಲ್ಲೂ ಈ ರೀತಿಯ ಘಟನೆಗಳು ನಡೆದಾಗ ಭಾರತದ ಗುಪ್ತಚರ ಇಲಾಖೆ ‘ರಾ’ ದ ಮೇಲೆ ಆರೋಪ ಬಂದಿತ್ತು. ಪಾಕ್ ನಲ್ಲಿ ಸತ್ತ ಭಾರತಕ್ಕೆ ಬೇಕಾದ ಉಗ್ರರ ಪಟ್ಟಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.
ಕುಖ್ಯಾತ ಲಷ್ಕರ್-ಇ-ಇಸ್ಲಾಂ (Lashkar-e-Islam) ಗುಂಪಿನ ಕಮಾಂಡರ್ ಎಂದು ಗುರುತಿಸ್ಪಡುತ್ತಿದ್ದ ಹಾಜಿ ಅಕ್ಬರ್ ಅಫ್ರಿದಿಯನ್ನು ಪಾಕಿಸ್ತಾನದ ಖೈಬರ್ ಜಿಲ್ಲೆಯ ಬಾರಾದಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಗ್ರಗಾಮಿ ಚಟುವಟಿಕೆಗಳು ಮತ್ತು ಉಗ್ರಗಾಮಿ ಸಿದ್ಧಾಂತಕ್ಕೆ ಹೆಸರುವಾಸಿಯಾದ ಲಷ್ಕರ್-ಇ-ಇಸ್ಲಾಂ ಸಂಘಟನೆ ಕರಾಳ ಇತಿಹಾಸವನ್ನು ಹೊಂದಿದೆ. ಈ ಹಿಂದೆ ಈ ಗುಂಪು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು, ಕಾಶ್ಮೀರದಿಂದ ಪಲಾಯನ ಮಾಡುವಂತೆ ಎಚ್ಚರಿಕೆ ನೀಡಿತ್ತು. ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸುವಂತೆ ಬೆದರಿಕೆ ಹಾಕಿತ್ತು. 2014ರಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ಅಕ್ಬರ್ ಸಂಪರ್ಕ ಹೊಂದಿದ್ದ ಎಂದು ವರದಿ ತಿಳಿಸಿದೆ. ಈತ ಈಗ ನಿಗೂಢವಾಗಿ ಹತ್ಯೆಯಾಗಿದ್ದಾನೆ.