ನ್ಯೂಸ್ ನಾಟೌಟ್: ಸಾವು ಅನ್ನೋದು ಮನುಷ್ಯನ ಪಾಲಿಗೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಬಂದು ಅಪ್ಪಳಿಸಬಹುದು ಅನ್ನೋದು ನಿಜವಾಗಿದೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಆದರ್ಶನಗರದ ನಿವಾಸಿ 4 ತಿಂಗಳ ಗರ್ಭಿಣಿ ನಿಶ್ಬಾ (20 ವರ್ಷ) ಏ.9ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಳೆದ ಏಳು ತಿಂಗಳ ಹಿಂದೆಯಷ್ಟೇ ಅವರು ಮದುವೆಯಾಗಿದ್ದರು. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ನಿಶ್ಬಾ ಪತಿಯ ಮನೆಯಲ್ಲಿ ನಿಧನರಾದರು ಎಂದು ಬೆಳ್ತಂಗಡಿಯ ಪ್ರಮುಖ ಪತ್ರಿಕೆಯಾಗಿರುವ ಸುದ್ದಿ ಉದಯ ವರದಿ ಮಾಡಿದೆ. ಮೃತರು ಕುಂಟಿನಿ ನಿವಾಸಿ ಖಾಲಿದ್ ಉಸ್ಮಾನ್ ರವರ ಸೊಸೆಯಾಗಿದ್ದಾರೆ. ತಂದೆ ಹಮೀದ್ , ತಾಯಿ ನಝೀಮ್ , ಸಹೋದರಿ ನುಸೈಬಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ ಎಂದು ತಿಳಿಸಲಾಗಿದೆ.