ನ್ಯೂಸ್ ನಾಟೌಟ್: ಲೋಕಸಭೆ ಚುನಾವಣೆಗೂ (Lok Sabha Election) ಮುನ್ನವೇ ಬಿಜೆಪಿಗೆ (BJP) ಗುಡ್ ನ್ಯೂಸ್ ಸಿಕ್ಕಿದೆ. ಗುಜರಾತ್ನಲ್ಲಿ (Gujarat) ಮೇ 7ರಂದು ಮತದಾನ ನಡೆಯಬೇಕಿದೆ. ಆದರೆ ಚುನಾವಣೆಗೂ ಮುನ್ನವೇ ಬಿಜೆಪಿ ಖಾತೆ ತೆರೆದಿದೆ ಎನ್ನಲಾಗಿದೆ. ಸೂರತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ. ಇದರ ಜೊತೆಗೆ ಏಳು ಸ್ವತಂತ್ರ ಅಭ್ಯರ್ಥಿಗಳು ಸಹ ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಇದೀಗ ಸೂರತ್ ಕ್ಷೇತ್ರದಲ್ಲಿ ಬಿಜೆಪಿಯ ಮುಕೇಶ್ ದಲಾಲ್ ಒಬ್ಬರೇ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ಹಾಗಾಗಿ ಬಿಜೆಪಿ ಚುನಾವಣೆ ಮುನ್ನವೇ ಈ ಸ್ಥಾನವನ್ನು ಅವಿರೋಧವಾಗಿ ಗೆದ್ದಂತಾಗಿದೆ. ಸೂರತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗು ನೀಲೇಶ್ ಕುಂಭಾಣಿ ಸ್ಪರ್ಧಿಸಬೇಕಾಗಿತ್ತು. ಆದರೆ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಪಕ್ಷೇತ್ರರವಾಗಿ ಸ್ಪರ್ಧಿಸಿದ್ದ ಇತರ 8 ಅಭ್ಯರ್ಥಿಗಳು ಕೂಡ ತಮ್ಮ ನಾಮಪತ್ರ ಸಲ್ಲಿಸಲಿದೆ. ಹಾಗಾಗಿ ಬಿಜೆಪಿ ಅವಿರೋಧವಾಗಿ ಗೆಲುವು ಸಾಧಿಸಿದೆ. ಸೂರತ್ ಸ್ಥಾನಕ್ಕೆ ಒಟ್ಟು 10 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಗುಜರಾತ್ನ ಎಲ್ಲಾ 26 ಲೋಕಸಭಾ ಸ್ಥಾನಗಳಿಗೆ ಮೂರನೇ ಹಂತದಲ್ಲಿ ಅಂದರೆ ಮೇ 7 ರಂದು ಮತದಾನ ನಡೆಯಲಿದೆ. ಇದಕ್ಕಾಗಿ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 19 ಮತ್ತು ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ದಿನಾಂಕ ಏಪ್ರಿಲ್ 22 ಅಂತಿಮ ದಿನವಾಗಿತ್ತು. ಬಿಜೆಪಿ ದೂರಿನ ನಂತರ, ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರ ತಿರಸ್ಕರಿಸಲಾಗಿದೆ ಎನ್ನಲಾಗಿದೆ.