ನ್ಯೂಸ್ ನಾಟೌಟ್ : ಬಹುಭಾಷಾ ನಟಿ ಸೌಂದರ್ಯ ಮರೆಯಾಗಿ ದಶಕಗಳೇ ಕಳೆದು ಹೋಗಿದೆ. ಆದ್ರೂ ನಟಿ ಸೌಂದರ್ಯ ಅವರ ಬ್ಯೂಟಿಗೆ,ಅಭಿನಯಕ್ಕೆ ಈಗಲೂ ಅಭಿಮಾನಿಗಳಿದ್ದಾರೆ. ಸದ್ಯ ಬಹುಬೇಡಿಕೆಯ ನಟಿಯಾಗಿದ್ದ ಸೌಂದರ್ಯ 100 ಕೋಟಿ ಆಸ್ತಿ ಬಗ್ಗೆ ಕುತೂಹಲಕಾರಿ ವಿಚಾರ ಹೊರ ಬಿದ್ದಿದೆ.ಅಷ್ಟೊಂದು ಆಸ್ತಿ ಯಾರ ಪಾಲಾಯ್ತು ಎಂಬುದರ ಬಗ್ಗೆ ಚರ್ಚೆಯಲ್ಲಿದೆ.
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದ ಸೌಂದರ್ಯಗೆ ದಕ್ಷಿಣದಲ್ಲಿ ಅಪಾರ ಅಭಿಮಾನಿಗಳಿದ್ರು.1976 ರಲ್ಲಿ ಕೋಲಾರದ ಮುಳಬಾಗಿಲಿನಲ್ಲಿ ಜನಿಸಿದ ನಟಿ ಸೌಂದರ್ಯ ಅವರ ತಂದೆ ಉದ್ಯಮಿ ಮತ್ತು ಚಿತ್ರ ನಿರ್ಮಾಪಕರಾಗಿದ್ರು. ಚಿತ್ರರಂಗದಲ್ಲಿನ ಆಸಕ್ತಿಯಿಂದ ಎಂ.ಬಿ.ಬಿ.ಎಸ್ ವಿದ್ಯಾಭ್ಯಾಸವನ್ನು ನಿಲ್ಲಿಸಿದ ಸೌಂದರ್ಯ 1992 ರಲ್ಲಿ ತೆರೆಕಂಡ ಕನ್ನಡದ ಗಂಧರ್ವ ಚಿತ್ರದಿಂದ ಸಿನಿಪಯಣ ಆರಂಭಿಸಿದರು.
ಅಮಿತಾಬ್ ಬಚ್ಚನ್, ರಜನಿಕಾಂತ್, ರವಿಚಂದ್ರನ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ಅನೇಕ ಟಾಪ್ ನಾಯಕರ ಜೊತೆ ಸೌಂದರ್ಯ ನಟಿಸಿದ್ದಾರೆ. ಎಲ್ಲಾ ಟಾಪ್ ನಿರ್ದೇಶಕರೊಂದಿಗೆ ಮತ್ತು ನಟರೊಂದಿಗೆ ಕಾರ್ಯನಿರ್ವಹಿಸಿದ ಸೌಂದರ್ಯ ತಮ್ಮ 12 ವರ್ಷದ ಸಿನಿ ಪಯಣದಲ್ಲಿ ಸುಮಾರು 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರದಿಂದ ಸಿನಿರಂಗ ಪ್ರವೇಶ ಮಾಡಿದ್ದ ಸೌಂದರ್ಯರ ಕೊನೆಯ ಸಿನಿಮಾ ಕೂಡ ಕನ್ನಡದ ಆಪ್ತಮಿತ್ರವಾಗಿದ್ದು ವಿಶೇಷ.
ನಟಿ ಸೌಂದರ್ಯ ತಮ್ಮ ಬಾಲ್ಯದ ಗೆಳೆಯ ಮತ್ತು ಸಾಫ್ಟವೇರ್ ಇಂಜಿನಿಯರ್ ಜಿ.ಎಸ್.ರಘುರನ್ನು ವಿವಾಹವಾಗಿ, ಬಳಿಕ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡರು. 2004ರಲ್ಲಿ ಭಾರತೀಯ ಜನತಾ ಪಕ್ಷ ಸೇರಿದ್ದರು. ಸಹನಟಿ ಮತ್ತು ಗೆಳತಿ ವಿಜಯಶಾಂತಿಯೊಂದಿಗೆ ಸೇರಿ ಆಂಧ್ರದಲ್ಲಿ ಲಾಲಕೃಷ್ಣ ಅಡ್ವಾಣಿಯವರ 2 ಅಂದೋಲನಗಳನ್ನು ಆಯೋಜಿಸಿದ್ದರು.
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಡಿಕೆ ನಟಿಯಾಗಿದ್ದಾಗಲೇ ಸೌಂದರ್ಯ ರಾಜಕೀಯದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ರು. 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದರು. ತೆಲಂಗಾಣದ ಕರೀಂನಗರದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಸೌಂದರ್ಯ ಭಾಗವಹಿಸಬೇಕಿತ್ತು. ಹೀಗಾಗಿ 2004 ಜುಲೈ 7ರಂದು ಬೆಂಗಳೂರಿನಿಂದ ಲಘು ವಿಮಾನದಲ್ಲಿ ಹೊರಟಿದ್ರು. ಈ ವೇಳೆ ಅಪಘಾತ ಸಂಭವಿಸಿ ನಟಿ ಸೌಂದರ್ಯ ದುರಂತ ಅಂತ್ಯ ಕಂಡರು.
ನಟಿ ಸೌಂದರ್ಯ 100 ಕೋಟಿ ಆಸ್ತಿ ಹೊಂದಿದ್ದು, 31 ವರ್ಷಕ್ಕೆ ನಿಧನರಾದ ನಟಿ ಸೌಂದರ್ಯ ನೂರು ಕೋಟಿ ಆಸ್ತಿ ಹೊಂದಿದ್ದರು.
ಸೌಂದರ್ಯ ನಿಧನ ಬಳಿಕ ಆಸ್ತಿಗಾಗಿ ನಟಿಯ ಪತಿ ಕೋರ್ಟ್ ಮೆಟ್ಟಿಲು ಏರಿದ್ರು. ಬಳಿಕ ನ್ಯಾಯಲದಿಂದಲೇ ರಘು ಆಸ್ತಿಯನ್ನು ತನ್ನದಾಗಿಸಿಕೊಂಡ್ರು. ಸೌಂದರ್ಯ ನೂರು ಕೋಟಿ ಆಸ್ತಿ ಅವರ ಅಮ್ಮ ಹಾಗೂ ಪತಿ ರಘುರಿಗೆ ಸಮವಾಗಿ ಹಂಚಲಾಗಿದೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸೌಂದರ್ಯ ಆಸ್ತಿ ಸಿಕ್ಕ ಬಳಿಕ ಪತಿ ರಘು 2ನೇ ಮದುವೆ ಮಾಡಿಕೊಂಡು ಗೋವಾದಲ್ಲಿ ನೆಲೆಸಿದ್ದಾರೆ.