ಆಟಿಸಂ ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಬೆಳವಣಿಗೆಗೆ ಸಂಬಂಧಪಟ್ಟ ಒಂದು ಸಂಕೀರ್ಣ ಸಮಸ್ಯೆ. ಹೆಚ್ಚಾಗಿ ಮಕ್ಕಳ ಶೈಕ್ಷಣಿಕ ಅವಧಿಯ ಆರಂಭದಲ್ಲಿ ಅಂದರೆ,ಸರಿಸುಮಾರು 3ನೇ ವರ್ಷದಿಂದ ಗುರುತಿಸಲ್ಪಡುತ್ತದೆ. 2ನೇ ವರ್ಷದವರೆಗೆ ಇದರ ಗುಣಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಹೀಗಾಗಿ ಸಾಧ್ಯವಾದಷ್ಟು ಬೇಗನೆ ಆಟಿಸಂನ್ನು ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸಬೇಕು. ಇಲ್ಲವಾದಲ್ಲಿ ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು ಸಾಧ್ಯವಾಗದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ವಿಶ್ವ ಆಟಿಸಂ ಜಾಗೃತಿ ದಿನವನ್ನು ಪ್ರತಿ ವರ್ಷ ಏಪ್ರಿಲ್ ೨ರಂದು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಧ್ಯಯನದ ಪ್ರಕಾರ, ಪ್ರತಿ ನೂರು ಮಕ್ಕಳಲ್ಲಿ ಒಬ್ಬರು ಆಟಿಸಂನಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ 2008ರಲ್ಲಿ ಯುಎನ್ ಜನರಲ್ ಅಸೆಂಬ್ಲಿಯು ಈ ಸ್ಥಿತಿಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಹಾಗೂ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಪ್ರಪಂಚದಾದ್ಯಂತ ಏಪ್ರಿಲ್ 2 ನ್ನು “ವಿಶ್ವ ಆಟಿಸಂ ಜಾಗೃತಿ ದಿನ” ಎಂದು ಘೋಷಿಸಿತು.
“ಆಟಿಸಂ” ಎಂಬ ಪದವನ್ನು 1991 ರಲ್ಲಿ ಯುಜೆನ ಬ್ಲ್ಯೂಲರ್ ಎಂಬ ಮನೋವೈದ್ಯರು ಕಂಡುಹಿಡಿದರು. ಅವರು ಸ್ಕಿಜೋಫ್ರೇನಿಯಾದ ರೋಗಲಕ್ಷಣಗಳಲ್ಲಿ ಒಂದನ್ನು ವಿವರಿಸಲು ಈ ಪದವನ್ನು ಬಳಸಿದರು. ನಂತರ 1993ರಲ್ಲಿ , ಮಕ್ಕಳ ಮನೋವೈದ್ಯರಾದ ಡಾ.ಲಿಯೋ ಕನ್ನರ್ ಅವರು ಆಟಿಸಂನ್ನು ಸಾಮಾಜಿಕ ಮತ್ತು ಭಾವನಾತ್ಮಕ ಅಸ್ವಸ್ಥತೆ ಎಂದು ವರ್ಗೀಕರಿಸಿದರು. ಮುಂದೆ 1994 ರಲ್ಲಿ ಆಟಿಸಂ ನ್ನು ” ಅಸ್ವಸ್ಥತೆ” ಎಂದು ಘೋಷಿಸಲಾಯಿತು. ಇದರಲ್ಲಿ ಮಕ್ಕಳು ಸಾಮಾಜಿಕ ಮತ್ತು ಸಂವಹನ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹಾನ್ಸ್ ಆಸ್ಪರ್ಗರ್ ಉಲ್ಲೇಖಿಸಿದ್ದಾರೆ.
ಇತ್ತೀಚಿಗೆ ಮಕ್ಕಳು ಹಲವಾರು ರೀತಿಯ ಮಾನಸಿಕ ಸಾಮಾಜಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಪ್ರಾಮಾಣಿಕೃತವಲ್ಲದ ಕಲಿಕಾ ವಿಧಾನ. ಕೆಲವು ನಿರ್ದಿಷ್ಟ ವಿಷಯಗಳಲ್ಲಿ ತೀವ್ರತರವಾದ ಆಸಕ್ತಿಗಳು,ಪೋಷಕರ ಒತ್ತಡದ ದಿನಚರಿ, ಬೆಳೆಯುವ ಪರಿಸರ, ಒಂಟಿತನ, ಜಾಗತೀಕರಣಗೊಂಡ ಆಹಾರ ಪದ್ಧತಿ, ಬದುಕುವ ರೀತಿ, ಕೌಟುಂಬಿಕ ಸಮಸ್ಯೆಗಳು, ವಿಭಕ್ತ ಕಟುಂಬ ಹೀಗೆ ಹಲವಾರು ಪರೋಕ್ಷ ಕಾರಣಗಳಿಂದಾಗಿ ಮಕ್ಕಳು ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.ಆಟಿಸಂನ್ನು ಮುಖ್ಯವಾಗಿ ಅದರ ವಿಶಿಷ್ಟವಾದ ಸಾಮಾಜಿಕ ಸಂವಹನದ ಮೂಲಕ ಗುರುತಿಸಲ್ಪಡಲಾಗುತ್ತದೆ.ಕಲಿಕಾ ವಿಧಾನ, ಕೆಲವು ನಿರ್ದಿಷ್ಟ ವಿಷಯಗಳಲ್ಲಿ ತೀವ್ರತರವಾದ ಆಸಕ್ತಿಗಳು,ದಿನಚರಿಗಳ ಮೇಲಿನ ಒಲವು, ಮುಖ್ಯವಾಗಿ ಸಂವಹನಗಳಲ್ಲಿನ ಸವಾಲುಗಳು ಸಂವೇದನಾಶೀಲತೆಯನ್ನು ಗುರುತಿಸುವ ನಿರ್ದಿಷ್ಟವಾದ ವಿಧಾನಗಳಿಂದ ರೂಪಿಸಲ್ಪಟ್ಟಿದೆ.
(ಸಾಂಕ್ರಾಮಿಕ ರೋಗಶಾಸ್ತ್ರ)
ಎಪಿಡಮಿಯಾಲಜಿ ಎಂದರೆ ಸಾಂಕ್ರಾಮಿಕ ರೋಗವಿಜ್ಞಾನವು ಜನಸಮಷ್ಟಿಯಲ್ಲಿ ಹಬ್ಬಿರುವ ರೋಗಗಳ ಕಾರಣ, ಅವು ಹರಡುವ ಪರಿ, ಅವುಗಳ ನಿವಾರಣೋಪಾಯ, ಚಿಕಿತ್ಸಾಕ್ರಮ ಮುಂತಾದ ಜನಾರೋಗ್ಯ ಸಂಬಂಧಿ ವಿಷಯಗಳನ್ನು ಸಮಗ್ರವಾಗಿಯೂ, ಕೂಲಂಕಷವಾಗಿಯೂ ಅಧ್ಯಯನಗೈಯುವ ವೈದ್ಯವಿಜ್ಞಾನ ವಿಭಾಗ.ಪ್ರಪಂಚದ ಎಲ್ಲಾ ಪ್ರದೇಶಗಳಲ್ಲಿ ಆಟಿಸಂ ಪ್ರಮಾಣವು ಅಧಿಕವಾಗಿದೆ ಮತ್ತು ತಿಳುವಳಿಕೆಯ ಕೊರತೆಯ ವ್ಯಕ್ತಿಗಳು, ಅವರ ಕುಟುಂಬ ಮತ್ತು ಸಮುದಾಯಗಳ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ.1:130 (0.76%) ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಲ್ಲಿ ಆಟಿಸಂ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ (ಹುಡುಗರಲ್ಲಿ ಸಂಭವಿಸುವ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚು)
ಎಳೆ ವಯಸ್ಸಲ್ಲಿ ರೋಗಲಕ್ಷಣಗಳು ಇದು ಕಾಣಿಸಿಕೊಳ್ಳಬಹುದು. ಹೆಸರು ಕರೆದಾಗ ಕಡಿಮೆ ಪ್ರತಿಕ್ರಿಯೆ ಮಾಡುವುದು ಹಾಗೂ ವಸ್ತುಗಳ ಅಸಾಮಾನ್ಯ ಬಳಕೆಯು ಎಎಸ್ಡಿ ಅಪಾಯಕ್ಕೆ ಬಲವಾದ ಮುನ್ಸೂಚನೆ ಎಂಬಂತಿದೆ.ASD ಹೊಂದಿರುವ ಮಗುವಿಗೆ ಇತರರೊಂದಿಗೆ ಸಂವಹನ ನಡೆಸಲು ಕಷ್ಟವಾಗುತ್ತದೆ. ಸಾಮಾಜಿಕ ಕೌಶಲ್ಯಗಳೊಂದಿಗಿನ ಸಮಸ್ಯೆಗಳು ಕೆಲವು ಸಾಮಾನ್ಯ ಲಕ್ಷಣಗಳು ಎನ್ನಬಹುದು. ನಿಮ್ಮ ಮಗು ಸ್ಪೆಕ್ಟ್ರಮ್ನಲ್ಲಿದ್ದರೆ, ಅವರು 8 ರಿಂದ 10 ತಿಂಗಳ ವಯಸ್ಸಿನ ಹೊತ್ತಿಗೆ ಕೆಲವು ಸಾಮಾಜಿಕ ರೋಗಲಕ್ಷಣಗಳು ಕಾಣಿಸಬಹುದು.ಇನ್ನು ಪ್ರಿಸ್ಕೂಲ್ ಅಥವಾ ಶಾಲಾ ವಯಸ್ಸಿನವರೆಗೆ ಈ ಲಕ್ಷಣಗಳಿದ್ದರೆ ಸಮಸ್ಯೆಗಳಾಗುತ್ತವೆ. ಈ ಸಮಯದಲ್ಲಿ ಬೇರೆ ಮಕ್ಕಳ ಜೊತೆಗಿನ ಸಂವಹನ ಮತ್ತು ಗುಂಪು ಭಾಗವಹಿಸುವಿಕೆಗೆ ಸಾಮಾಜಿಕ ಬೇಡಿಕೆಗಳು ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಈ ಸಮಸ್ಯೆ ಇರುವ ಮಕ್ಕಳಿಗೆ ಬೆರೆಯುವುದು ಕಷ್ಟಕರವಾಗಿರುತ್ತದೆ.
▪ 12 ತಿಂಗಳೊಳಗೆ – ಹೆಸರಿಗೆ ಪ್ರತಿಕ್ರಿಯಿಸುವುದಿಲ್ಲ
▪ 14 ತಿಂಗಳೊಳಗೆ – ಯಾವುದೇ ವಸ್ತುವನ್ನು ತೋರಿಸಿದರೂ ಅದರ ಕಡೆಗೆ ಗಮನ ನೀಡುವ ಆಸಕ್ತಿಯನ್ನು ತೋರಿಸುವುದಿಲ್ಲ.
▪ 18 ತಿಂಗಳೊಳಗೆ – ಆಟವಾಡುವುದಿಲ್ಲ
1.ಮಕ್ಕಳಲ್ಲಿ ಸಂವಹನದ ಹಾಗೂ ಭಾಷೆಯ ಕೊರತೆ ಸಾಮಾಜಿಕವಾಗಿ ಬೆರೆಯಲು ಸಾಧ್ಯವಾಗುವುದಿಲ್ಲ.ಬೇರೆಯವರ ಭಾವನೆಗಳನ್ನು ಈ ಮಕ್ಕಳು ಅರ್ಥ ಮಾಡಿಕೊಳ್ಳುವುದಿಲ್ಲ.
2.ಕಣ್ಣಿಗೆ ಕಣ್ಣಿಟ್ಟು ನೋಡಲು ಹಿಂಜರಿಯುತ್ತಾರೆ.
3.ಮಾತನಾಡಲು ತೊಂದರೆ, ಶಬ್ದಗಳನ್ನು ಮತ್ತೆ ಹೇಳಲು ಹಾಗೂ ಯಾವುದಾದರೂ ಸಾಲುಗಳನ್ನು ನೆನಪಿಟ್ಟು ಹೇಳಲು ತೊಂದರೆ ಪಡುತ್ತಾರೆ.
4.ಧ್ವನಿಯಲ್ಲಿ ವ್ಯತ್ಯಾಸವಿರುತ್ತದೆ ಹಾಗೂ ಅವರು ಭಾವನೆಗಳನ್ನು ವ್ಯಕ್ತ ಪಡಿಸುವುದಿಲ್ಲ
5.ಬೇರೆಯವರ ಮುಖದ ಭಾವನೆಗಳನ್ನಾಗಲಿ, ಧ್ವನಿಯಲ್ಲಿ ಆಗುವ ವ್ಯತ್ಯಾಸವನ್ನಾಗಲಿ ಗುರುತಿಸಲು ಇವರಿಗೆ ಸಾಧ್ಯವಾಗುವುದಿಲ್ಲ(ಗದರುವುದು, ಖುಷಿ ವ್ಯಕ್ತ ಪಡಿಸುವುದು…)
ಎಎಸ್ಡಿಯ ಪ್ರಾಥಮಿಕ ಚಿಕಿತ್ಸೆಯು ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರೋಗ್ರಾಮಿಂಗ್ ಅನ್ನು ಒಳಗೊಂಡಿರುತ್ತದೆ.ಆರಂಭದಲ್ಲೇ ಚಿಕಿತ್ಸೆ ಮತ್ತು ಸೂಕ್ತ ಚಿಕಿತ್ಸೆಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಆಟಿಸಂ ಮತ್ತು ಸಂವಹನ, ಅಂಗವಿಕಲ ಮಕ್ಕಳ ಚಿಕಿತ್ಸೆ ಮತ್ತು ಶಿಕ್ಷಣದಂತಹ ಶೈಕ್ಷಣಿಕ ಚಿಕಿತ್ಸೆಗಳು (TEACCH)
ಭಾಷಣ ಮತ್ತು ಭಾಷಾ ಚಿಕಿತ್ಸೆ ಇವು ಮುಖ್ಯ ಪಾತ್ರ ವಹಿಸುತ್ತದೆ.ಪರಿಸ್ಥಿತಿಗಳ ನಿರ್ವಹಣೆಗೆ ಸ್ಪೀಚ್ ಥೆರಪಿ, ಭಾಷಾ ಥೆರಪಿಯಂತಹ ವೈದ್ಯಕೀಯ ಅಥವಾ ನಡವಳಿಕೆಯ ಆರೋಗ್ಯ ಚಿಕಿತ್ಸೆಯು ಹೆಚ್ಚಾಗಿ ಅಗತ್ಯವಾಗಿರುತ್ತದೆ.ಔಷಧಿಗಳ ಪಾತ್ರಗಳಿಗಿಂತ ಹೆಚ್ಚಿನ ಪೋಷಕರ ಭಾಗವಹಿಸುವಿಕೆ , ಚಿಕಿತ್ಸೆಗೆ ಒಳಗೊಳ್ಳುವಿಕೆ ಮತ್ತು ಬೆಂಬಲಕ್ಕಾಗಿ ಸಮುದಾಯ ಮತ್ತು ಸಾಮಾಜಿಕ ಹಂತಗಳಲ್ಲಿ ಕ್ರಮಗಳ ಜೊತೆಗೆ ಕಾಳಜಿಯ ಅಗತ್ಯವಿದೆ.
ಆಟಿಸಂ ಸ್ಪೆಕ್ಟ್ರಮ್ ಅಸ್ವಸ್ಥತೆಯು ಜೀವಮಾನ ಪೂರ್ತಿ ಅದೇ ಸ್ಥಿತಿಯಲ್ಲಿರಬೇಕಾದರೂ ಕಾಳಜಿ ಚಿಕಿತ್ಸೆ ಅತ್ಯಗತ್ಯ. ಆದರೂ ಕೆಲವರು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ. ಹೆಚ್ಚಿನವರು ಇದರಲ್ಲಿ ಪ್ರಗತಿ ಸಾಧಿಸುತ್ತಾರೆ.ಆದರೆ ವಯಸ್ಕರಾದಂತೆ ಸಾಮಾಜಿಕ ಮತ್ತು ನಡವಳಿಕೆಯ ಕಾರ್ಯದಲ್ಲಿ ಕೆಲವು ಪ್ರಮುಖ ದುರ್ಬಲತೆಯನ್ನು ಹೊಂದಿರುತ್ತಾರೆ.
ಆಟಿಸಂ ಜೀವಮಾನದ ನರವೈಜ್ಞಾನಿಕ ಸ್ಥಿತಿಯಾಗಿದ್ದು, ಇದು ಲಿಂಗ, ಜನಾಂಗ ಅಥವಾ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಬಾಲ್ಯದಲ್ಲಿಯೇ ಬರುವಂತಹ ಖಾಯಿಲೆಯಾಗಿದೆ.ಈ ನರವೈಜ್ಞಾನಿಕ ಬದಲಾವಣೆಯ ಸೂಕ್ತ ಬೆಂಬಲ, ವಸತಿ ಮತ್ತು ಸ್ವೀಕಾರವು ಸ್ಪೆಕ್ಟ್ರಮ್ನಲ್ಲಿರುವವರಿಗೆ ಸಮಾನ ಅವಕಾಶವನ್ನು ಮತ್ತು ಸಮಾಜದಲ್ಲಿ ಪೂರ್ಣ ಮತ್ತು ಪರಿಣಾಮಕಾರಿ ಭಾಗವಹಿಸುವಿಕೆಯನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ.