ಇದು ಸತ್ಯ ಘಟನೆ. ಇತ್ತೀಚಿಗೆ ನಮ್ಮ ಸ್ನೇಹಿತ ವರ್ಗದಲ್ಲಿ ನಡೆದಿರುವ ವಾಸ್ತವದ ಕಥೆ. ಅವರೊಂದು ಹೊಸ ಸ್ಕೂಟಿ ತೆಗೆದುಕೊಂಡಿದ್ದರು. ಆ Access 125 ಸ್ಕೂಟಿ ಕೆಲವು ದಿನಗಳ ಹಿಂದೆ ಅಪಘಾತಕ್ಕೆ ತುತ್ತಾಯಿತು. ಹೀಗಿರುವಾಗ ಆ ಗಾಡಿಯನ್ನು ತೆಗೆದುಕೊಂಡು ಕೇರಳದ ಬದಿಯಡ್ಕದ ಒಂದು ಶೋರೂಂನಲ್ಲಿ ಇಡ್ತಾರೆ. ಕೆಲಸದ ನಿಮಿತ್ತ ಅವರಿಗೆ ಕೆಲವು ದಿನಗಳ ತನಕ ಗಾಡಿಯನ್ನು ನೋಡಲು ಶೋ ರೂಂಗೆ ಹೋಗುವುದಕ್ಕೆ ಸಾಧ್ಯವಾಗಿರುವುದಿಲ್ಲ. ಹೀಗಿರುವಾಗ ಒಂದು ದಿನ ಬಿಡುವು ಮಾಡಿಕೊಂಡು ಗ್ರಾಹಕ ಶೋ ರೂಂಗೆ ಹೋಗ್ತಾರೆ. ಈ ವೇಳೆ ಅಲ್ಲಿದ್ದ ಪ್ರತಿನಿಧಿಗಳು ಹೇಳ್ತಾರೆ. ನಿಮ್ಮ ಗಾಡಿಯನ್ನು ಇಲ್ಲಿ ರಿಪೇರಿ ಮಾಡುವುದಕ್ಕೆ ಆಗೋದಿಲ್ಲ. ನೀವು ಬೇರೆ ಶೋ ರೂಂಗೆ ತೆಗೆದುಕೊಂಡು ಹೋಗಿ ಅಂತಾರೆ. ಅಂತೆಯೇ ಗ್ರಾಹಕರ ಜೊತೆ ಸಹಿ ಹಾಕಿಸಿಕೊಂಡು ಗಾಡಿಯನ್ನು ಕೊಟ್ಟು ಕಳಿಸ್ತಾರೆ. ತನ್ನ ಸ್ಕೂಟಿಯನ್ನು ಎಲ್ಲಿಂದ ಖರೀದಿ ಮಾಡಿದ್ದರೂ ಅದೇ ಶೋ ರೂಂಗೆ ಗ್ರಾಹಕ ರಿಪೇರಿಗಾಗಿ ತಂದು ಬಿಡ್ತಾರೆ. ಆದರೆ ಈ ಸಮಯದಲ್ಲಿ ಗಾಡಿಯೊಳಗಿದ್ದ ಎರಡು ಪಾರ್ಟ್ ನಾಪತ್ತೆಯಾಗಿರುವುದರ ಬಗ್ಗೆ ಅನುಮಾನ ಬರುತ್ತೆ. ಹಾಗೆ ಪರಿಶೀಲಿಸಿದಾಗ ಒಳಗಿದ್ದ ಬ್ಯಾಟರಿ, CARBURETOR ಇರಲಿಲ್ಲ. ಇದು ಹೀಗೆ ಆಗುವುದಕ್ಕೆ ಹೇಗೆ ಸಾಧ್ಯ ಎಂದು ಸಂತ್ರಸ್ತ ಗ್ರಾಹಕ ಬದಿಯಡ್ಕದ ಶೋ ರೂಂಗೆ ಕರೆ ಮಾಡಿ ಕೇಳಿದಾಗ ..’ಇಲ್ಲ ನಮ್ಮಲ್ಲಿ ಇಲ್ಲ. ನೀವು ಎಲ್ಲ ಚೆಕ್ ಮಾಡಿ ತೆಗೆದುಕೊಂಡು ಹೋಗಬೇಕಿತ್ತು. ಡಿಕ್ಲರೇಷನ್ ಲೆಟರ್ ಗೆ ಸಹಿ ಹಾಕಿದ್ದೀರಿ’ ಎಂದು ಉತ್ತರ ಬಂತು. ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ತ ಗ್ರಾಹಕ, ‘ನೀವು ಸುಮ್ಮನೆ ನಮ್ಮನ್ನು ರೇಗಿಸ್ಬೇಡಿ ಆಯ್ತಾ..? ಗಾಡಿ ತೆಗೆದುಕೊಂಡು ಹೋಗುವಾಗ ಬ್ಯಾಟರಿ, CARBURETOR ಉಂಟಾ ಅಂತ ಬಿಚ್ಚಿ ಚೆಕ್ ಮಾಡೋಕೆ ಆಗುತ್ತಾ..? ನೀವೆಂತ ಅವಿವೇಕಿಗಳ ಥರ ಮಾತಾಡ್ತೀರಿ.. ನಾನು ಪೊಲೀಸ್ ದೂರು ನೀಡುತ್ತೇನೆ’ ಎಂದು ಗಟ್ಟಿಯಾಗಿ ಹೇಳಿ ಫೋನ್ ಇಡುತ್ತಾರೆ. ಅಂತೆಯೇ ಇವರು ಪೊಲೀಸ್ ದೂರು ಕೂಡ ನೀಡುತ್ತಾರೆ.
ಬದಿಯಡ್ಕದ ಶೋರೂಂಗೆ ಪೊಲೀಸ್ ಠಾಣೆಯಿಂದ ಕರೆ ಹೋಗುತ್ತೆ. ಈ ವೇಳೆ ಅಲ್ಲಿನ ಸಿಬ್ಬಂದಿ ನಮ್ಮ ಶೋ ರೂಂ ಅನ್ನು ಲೀಸ್ ಗೆ ನೀಡಿದ್ದೇವೆ. ಅವರಿಗೆ ಹೇಳುತ್ತೇವೆ ಎಂದು ಮಹಿಳೆಯೊಬ್ಬರ ನಂಬರ್ ಕೊಡ್ತಾರೆ. ಆ ಮಹಿಳೆಗೆ ಕೇಳಿದಾಗ ಮೊದಲಿಗೆ ಇಲ್ಲ ಎಂದ ಆಕೆ ನಂತರ ‘ಆಗಿದ್ದು ನಿಜ, ಅದನ್ನು ವಾಪಸ್ ಹಾಕೋಕೆ ನಮಿಗೆ ಮರೆತೇ ಹೋಗಿತ್ತು. ಅದು ಇಲ್ಲೇ ಬಾಕಿ ಆಗಿದೆ. ಅದನ್ನು ವಾಪಸ್ ಗ್ರಾಹಕರಿಗೆ ಹಿಂದಿರುಗಿಸುತ್ತೇವೆ’ ಎಂದು ಹೇಳಿದರು. ಹೀಗಾಗಿ ಪೊಲೀಸ್ ಕೇಸ್ ಆಗಲಿಲ್ಲ. ನಂತರ ಆ ಮಹಿಳೆ ಬಿಚ್ಚಿಟ್ಟಿದ ವಾಹನದ ಬಿಡಿ ಭಾಗವನ್ನು ನೀಡಿದ್ರು. ಆದರೆ ಹೊಸ ಗಾಡಿಯ ಹೊಸ ಬ್ಯಾಟರಿ ಬದಲಿಗೆ ಹಳೆ ಬ್ಯಾಟರಿ ಸಿಕ್ಕಿತು. ಇದು ಬೇಡ ನನಗೆ ಹೊಸತು ಬೇಕು ಎಂದು ಗ್ರಾಹಕ ಪಟ್ಟು ಹಿಡಿದಾಗ ..ಹೊಸ ಬ್ಯಾಟರಿ ಇಲ್ಲ ಅದರ ಹಣ ನೀಡುತ್ತೇವೆ ಎಂದು ಗ್ರಾಹಕರಿಗೆ ತಿಳಿಸಿದರು. ಅದರಂತೆ ಹಣವನ್ನು ಕೂಡ ನೀಡಿದ್ರು. ಇದರಲ್ಲಿ ನಾವು ತಿಳಿದುಕೊಳ್ಳುವ ಮುಖ್ಯ ವಿಚಾರವೇನೆಂದರೆ ನಮ್ಮ ಗಾಡಿಯನ್ನು ಶೋ ರೂಂಗೆ ಇಡುವಾಗ ಎಚ್ಚರದಿಂದ ಇರಬೇಕು. ಇಲ್ಲದಿದ್ದರೆ ಕೈಗೆ ‘ಚೊಂಬು’ ಸಿಗುವುದು ಖಚಿತ. ಇಂತಹ ಕಹಿ ಅನುಭವಗಳು ನಿಮಗೇನಾದರೂ ಆಗಿದ್ದರೆ ಕಾಮೆಂಟ್ ಮಾಡಿ ತಿಳಿಸಿ.