ನ್ಯೂಸ್ ನಾಟೌಟ್: ಲೋಕ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 77.56 ಶೇ. ಮತದಾನವಾಗಿದೆ. ಇಡೀ ಜಿಲ್ಲೆಯಲ್ಲಿ ಸುಳ್ಯ ತಾಲೂಕಿನಿಂದಲೇ ಅತೀ ಹೆಚ್ಚು ಮತದಾನಗೊಂಡಿದೆ. ಅಂದ್ರೆ ಸುಳ್ಯದಲ್ಲಿ ಶೇ. 83.01ರಷ್ಟು ಮತದಾನಗೊಂಡಿದೆ. ಉಳಿದಂತೆ ಎರಡನೇ ಸ್ಥಾನದಲ್ಲಿ ಬೆಳ್ತಂಗಡಿ ಇದೆ. ಇಲ್ಲಿ ಶೇ. 81.30ರಷ್ಟು ಮತದಾನವಾಗಿದೆ.
ಉಳಿದಂತೆ ಬಂಟ್ವಾಳದಲ್ಲಿ ಶೇ. 81.28, ಪುತ್ತೂರಿನಲ್ಲಿ ಶೇ.83.01 ರಷ್ಟು ಮತದಾನವಾಗಿದೆ. ಮಂಗಳೂರಿನಲ್ಲಿ ಶೇ.78.36ರಷ್ಟು ಮತದಾನಗೊಂಡಿದ್ದರೆ ಮೂಡಬಿದಿರೆಯಲ್ಲಿ ಶೇ. 76.51ರಷ್ಟು ಮತದಾನವಾಗಿದೆ. ಮಂಗಳೂರು ಉತ್ತರದಲ್ಲಿ ಶೇ.73.78 ರಷ್ಟು ಮತದಾನಗೊಂಡಿದೆ. ಮಂಗಳೂರು ದಕ್ಷಿಣದಲ್ಲಿ ಶೇ.67.17ರಷ್ಟು ಮಾತ್ರ ಮತದಾನವಾಗಿದೆ. ಇಡೀ ದಕ್ಷಿಣ ಕನ್ನಡದಲ್ಲಿ ಅತೀ ಕಡಿಮೆ ಮತದಾನಗೊಂಡಿರುವುದು ಅದು ಮಂಗಳೂರು ದಕ್ಷಿಣ ಕ್ಷೇತ್ರದಲ್ಲಾಗಿದೆ.