ನ್ಯೂಸ್ ನಾಟೌಟ್: ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ನಲ್ಲಿ ಮಂಗಳೂರು ಮುಂಚೂಣಿಯಲ್ಲಿರುವ ಕ್ಷೇತ್ರ. ಆಗಾಗ ಕೋಮು ಸಂಘರ್ಷದ ಸುದ್ದಿಗಳು ಓಡಾಡಿದರೂ ಇಲ್ಲಿ ಬದುಕುವ ಜನರಿಗೆ ಕೋವು ಸೌಹಾರ್ಧತೆಯ ಬೀಡು ಎಂಬುದೂ ಗೊತ್ತು. ಈಗ ಈ ಕ್ಷೇತ್ರದ ಚುನಾವಣಾ ಕಣ ಕಾವೇರುತ್ತಿದೆ. ಬಿಜೆಪಿಯಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್ನಿಂದ ಪದ್ಮರಾಜ್ ಆರ್. ಇಬ್ಬರೂ ಹೊಸ ಮುಖಗಳಿಗೆ ಎರಡು ಪ್ರಬಲ ರಾಜಕೀಯ ಪಕ್ಷಗಳು ಮಣೆ ಹಾಕಿವೆ.
ಹಿಂದುತ್ವ ಮತ್ತು ಪ್ರಧಾನಿ ಮೋದಿಯೇ ಬಿಜೆಪಿಗೆ ಪ್ರಚಾರದ ಪ್ರಮುಖ ವಿಷಯವಾದರೆ, ಕಾಂಗ್ರೆಸ್ಗೆ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಮತ್ತು ಜಾತಿಯ ಮತಗಳ ಓಲೈಕೆಯೇ ಪ್ರಮುಖ ವಿಷಯ ಎಂದು ವಿಶ್ಲೇಷಿಸಲಾಗುತ್ತಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯ ನಳಿನ್ 3 ನೇ ಬಾರಿ ಗೆದ್ದಿದ್ದರೆ, ಕಾಂಗ್ರೆಸ್ನ ಮಿಥುನ್ ರೈಸೋತಿದ್ದರು. ಇಬ್ಬರೂ ಬಂಟ ಸಮುದಾಯದ ಅಭ್ಯರ್ಥಿಗಳು. ಮೋದಿ ಪ್ರಚಾರ, ಪುಲ್ವಾಮ ದಾಳಿ, ಸರ್ಜಿಕಲ್ ಸ್ಟ್ರೈಕ್, ಬಿಜೆಪಿ ಜತೆ ಸಂಘ ಪರಿವಾರ ಬೆನ್ನಿಗೆ ನಿಂತು ದುಡಿದ ಪರಿಣಾಮವಾಗಿ ಕಾಂಗ್ರೆಸ್ ಸೋತಿತ್ತು. ಈ ಬಾರಿ ಪ್ರಬಲ ಬಿಲ್ಲವ- ಬಂಟ ಸಮುದಾಯದ ಅಭ್ಯರ್ಥಿಗಳ ಮಧ್ಯೆ ಜಾತಿ ಲೆಕ್ಕಾಚಾರದಲ್ಲೂ ಸ್ಪರ್ಧೆಗಳು ನಡೆಯುತ್ತಿವೆ.
ದಕ್ಷಿಣ ಕನ್ನಡದ ಮತದಾರರ ಸಂಖ್ಯಾವಾರು ವಿವರ ಇಲ್ಲಿದೆ: ಮಹಿಳೆಯರು: 9,19,321, ಪುರುಷರು: 8,77,438, ತೃತೀಯ ಲಿಂಗಿಗಳು: 67 ಸೇರಿ ಒಟ್ಟು: 17,96,826 ಮತದಾರರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮುಂದಿನ ಅಭ್ಯರ್ಥಿಯನ್ನು ನಿರ್ಧರಿಸಲಿದ್ದಾರೆ.