ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಸುಡುವ ಬಿಸಿಲಿನ ಝಳಕ್ಕೆ ಮನುಷ್ಯರ ಜೊತೆ ಪ್ರಾಣಿಗಳು ಕೂಡ ತತ್ತರಿಸುತ್ತಿವೆ. ಇದೀಗ ಶ್ವಾನಗಳಲ್ಲಿ ಬಿಸಿಲಿನ ಝಳಕ್ಕೆ ಮೆದುಳು ಜ್ವರ ಕಾಣಿಸಿಕೊಂಡಿದೆ. ಇದು ಶ್ವಾನಗಳಲ್ಲಿ ನರಿವ ಸಾಮಾನ್ಯರೋಗವಾಗಿದ್ದರೂ ಸೂಕ್ತ ಚಿಕಿತ್ಸೆ ಮಾಡದಿದ್ದರೆ ಶ್ವಾನಗಳು ಸಾಯುವ ಸಾಧ್ಯತೆ ಇರುತ್ತದೆ. ಈ ರೋಗದ ನಿಯಂತ್ರಣ ಸಾಧ್ಯವಿದ್ದರೂ ಇದು ಮಾರಕ ರೋಗವೂ ಹೌದಾಗಿದೆ. ಆದರೆ ಇದು ಮನುಷ್ಯರಿಗೆ ಹರಡುವುದಿಲ್ಲ ಅನ್ನೋದು ತುಸು ಸಮಾಧಾನಕರ ಸಂಗತಿಯಾಗಿದೆ.
ಹೆಚ್ಚಾಗಿ ನಾಯಿಗಳು ಮರಿ ಹಾಕುವ ಸಮಯದಲ್ಲಿ ಈ ರೋಗ ಕಂಡುಬರುತ್ತವೆ. ವರ್ಷದ ಯಾವ ಸಮಯದಲ್ಲಿಯೂ ಈ ರೋಗ ನಾಯಿಗಳಿಗೆ ತಗಲಬಹುದು ಎಂದು ಹೇಳಲಾಗಿದೆ. ಪ್ರಾರಂಭದಲ್ಲಿ ಕಂಡು ಹಿಡಿದರೆ ಸೂಕ್ತ ಚಿಕಿತ್ಸೆ ನೀಡಬಹುದು. ಆದರೆ ವಾಂತಿ, ಭೇದಿ ಆರಂಭವಾದಲ್ಲಿ ನಾಯಿಗಳು ಬೇಗನೆ ಸಾವಿಗೀಡಾಗುತ್ತವೆ. ರೋಗ ಬಾರದಂತೆ ಆರಂಭದಲ್ಲಿ ಇಂತಿಷ್ಟು ದಿನಗಳ ಬಳಿಕ ಹಾಗೂ ದಿನಗಳ ಅಂತರದಲ್ಲಿ ಲಸಿಕೆ ನೀಡಿದಲ್ಲಿ ರೋಗವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು.
ಮೆದುಳು ಜ್ವರ ಪೀಡಿತ ನಾಯಿ ವಿಪರೀತ ಜ್ವರಕ್ಕೆ ಈಡಾಗುತ್ತದೆ. ತಲೆ ಮೇಲೆತ್ತಲು ಆಗದ ಸ್ಥಿತಿಗೆ ತಲುಪುತ್ತವೆ. ಆಹಾರ ಸೇವನೆಯನ್ನು ತ್ಯಜಿಸಿ ಆರೋಗ್ಯದಲ್ಲಿ ಕ್ಷೀಣಿವಾಗುತ್ತದೆ. ವಾಂತಿ ಭೇದಿ, ನರ ದೌರ್ಬಲ್ಯ, ಕಣ್ಣಿನ ಪೊರೆ ಸಮಸ್ಯೆಗಳು ಕಂಡುಬರುತ್ತವೆ. ರೋಗ ಪೀಡಿತ ನಾಯಿ ಆಹಾರ ಸೇವನೆ ಕಡಿಮೆ ಮಾಡಿ ಕೊನೆಗೆ ನೀರನ್ನು ಮಾತ್ರ ಸೇವಿಸುತ್ತದೆ. ಬಳಿಕ ಆಹಾರವನ್ನೂ ತ್ಯಜಿಸುತ್ತದೆ. ಮೆದುಳು ಜ್ವರ ಎಂಬುದು ನಾಯಿಗಳಿಂದ ನಾಯಿಗಳಿಗೆ ಹರಡುತ್ತದೆ.