ನ್ಯೂಸ್ ನಾಟೌಟ್: ಆರ್ಥಿಕ ವರ್ಷದ ಮೊದಲ ದಿನ ಎಲ್ಪಿಜಿ (LPG) ದರವನ್ನು ಕಡಿಮೆ ಮಾಡಲಾಗಿದ್ದು, ಸರ್ಕಾರ ಗ್ಯಾಸ್ ಬಳಕೆದಾರರಿಗೆ ಗುಡ್ನ್ಯೂಸ್ ನೀಡಿದೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ (19kg Commercial Cylinder Price) ಬೆಲೆ 30.50 ರೂ. ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಇನ್ನು 5ಕೆಜಿ ಎಫ್ಟಿಎಲ್ (ಫ್ರೀ ಟ್ರೇಡ್ ಎಲ್ಪಿಜಿ) ಸಿಲಿಂಡರ್ ಬೆಲೆ 7.50 ರೂಪಾಯಿ ಇಳಿಕೆಯಾಗಿದೆ. ಈ ಪರಿಷ್ಕೃತ ದರ ಇಂದು (ಏಪ್ರಿಲ್ 01) ರಿಂದಲೇ ಅನ್ವಯವಾಗಲಿದೆ ಎನ್ನಲಾಗಿದೆ. ಈ ಹಿಂದೆ ಮಾರ್ಚ್ 1ರಿಂದ ಅಂದರೆ ಇಂದಿನಿಂದ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿತ್ತು ಮಾರ್ಚ್ ಮೊದಲ ದಿನವೇ. ತೈಲ ಕಂಪನಿಗಳು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಿದ್ದವು,, ಈ ಹಿಂದೆ ಜನವರಿ, ಫೆಬ್ರುವರಿ ತಿಂಗಳಲ್ಲೂ ಬೆಲೆ ಏರಿಕೆಯಾಗಿತ್ತು. ಈಗ ಆರ್ಥಿಕ ವರ್ಷದ ಆರಂಭದಲ್ಲಿ ವಾಣಿಜ್ಯ ಸಿಲಿಂಡರ್ ಗಳಿಗೆ ಇಳಿಕೆ ಮಾಡಲಾಗಿದೆ.