ನ್ಯೂಸ್ ನಾಟೌಟ್: ಮಾನವರಿಗಿಂತ ಪ್ರಾಣಿಗಳೇ ಮೇಲು ಎಂಬ ಅಣ್ಣಾವರ ಸಾಲುಗಳಂತೆ, ಪ್ರಾಣಿ, ಪಕ್ಷಿಗಳೇ ಗುಣದಲಿ ಮೇಲು. ವಿಡಿಯೋವೊಂದು ವೈರಲ್ ಆಗಿದ್ದು, ಜೌಗು ಪ್ರದೇಶ, ನದಿ ನೀರಿನಲ್ಲಿ ಮೀನನ್ನು ತಿಂದು ಬದುಕುವಂತಹ ಬೆಳ್ಳಕ್ಕಿಯೊಂದು ನೀರಿನಿರಿಂದ ಹೊರ ಬಂದಂತಹ ಮೀನನ್ನು ತಿನ್ನದೆ, ಅದನ್ನು ವಾಪಸ್ ನೀರಿನಲ್ಲೇ ಬಿಟ್ಟು ಬಂದಿದೆ.
ಇದೀಗ ಕೊಕ್ಕರೆಯ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿದ್ದಾರೆ. ಈ ವಿಡಿಯೋವನ್ನು ಡಿಸಿ ಸಂಜಯ್ ಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸಮಯ ಉತ್ತಮವಾಗಿದ್ದಾಗ, ನಿಮ್ಮ ಬದ್ಧ ವೈರಿಗಳೂ ಸಹ ನಿಮ್ಮ ಸಹಾಯಕರಾಗುತ್ತಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ನೀರಿನಿಂದ ಹೊರ ಬಂದಂತಹ ಜೀವಂತ ಮೀನನ್ನು ಕಾಗೆಯೊಂದು ತಿನ್ನಲು ಪ್ರಯತ್ನ ಪಡುತ್ತಿರುವ ದೃಶ್ಯವನ್ನು ಕಾಣಬಹುದು. ಅಲ್ಲಿಗೆ ಬಂದಂತಹ ಬೆಳ್ಳಕ್ಕಿಯೊಂದು ಕಾಗೆಯನ್ನು ಓಡಿಸಿ, ಪಾಪ ಮೀನಿನ ಜೀವ ಉಳಿದರೆ ಸಾಕಪ್ಪಾ ಎನನುತ್ತಾ, ಮೀನನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿ ನೀರಲ್ಲಿ ಬಿಟ್ಟು ಬರುತ್ತೆ. ಬೆಳ್ಳಕ್ಕಿಯ ಮಾನವೀಯ ಕಾರ್ಯಕ್ಕೆ ನೋಡುಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.