ನ್ಯೂಸ್ ನಾಟೌಟ್: ಸುಳ್ಯ ಅಂದಕೊಡಲೇ ಮೊದಲು ನೆನಪಾಗೋದೆ ದಿವಂಗತ ಕುರುಂಜಿ ವೆಂಕಟರಮಣ ಗೌಡರು ಶ್ರಮವಹಿಸಿ ನಿಷ್ಠೆಯಿಂದ ಕಟ್ಟಿ ಬೆಳೆಸಿದ ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳು. ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದ ಹರಿಕಾರನ ಸಾಧನೆ, ಶ್ರಮ, ತಾಳ್ಮೆಗೆ ಬೆಲೆ ಕಟ್ಟೋಕೆ ಸಾಧ್ಯವೇ ಇಲ್ಲ. ನಮ್ಮೂರಿನ ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗೆ ನೆರೆಯ ಕೇರಳದಿಂದಲೂ ಭಾರಿ ಬೇಡಿಕೆ ಇದೆ. ಮಾತ್ರವಲ್ಲ ರಾಜ್ಯದ ವಿವಿಧ ಮೂಲೆಗಳಿಂದಲೂ ಜನ ಕೆವಿಜಿ ಆಯುರ್ವೇದ ಕಾಲೇಜನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಇದೀಗ ವಿದೇಶದಿಂದ ಭಾರಿ ಬೇಡಿಕೆ ಬರುತ್ತಿದೆ. ಇತ್ತೀಚೆಗೆ ಇಂಗ್ಲೆಂಡ್ ನ ಯುವತಿಯೊಬ್ಬರು ಸುಳ್ಯದ ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದು ಭಾರಿ ಸುದ್ದಿಯಾಗಿದ್ದರು. ಇದೀಗ ದೂರದ ಇಂಗ್ಲೆಂಡ್ ನಿಂದ ದಂಪತಿ ಸುಳ್ಯಕ್ಕೆ ಹಾರಿ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರತಿನಿಧಿ ಹರ್ಷಿತಾ ವಿನಯ್ ಸಂದರ್ಶನ ನಡೆಸಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ ವೀಕ್ಷಿಸಿ
ನೀವು ಕೆವಿಜಿ ಆಯುರ್ವೇದ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿರೋದು ತಿಳಿಯಿತು, ಭಾರತದಲ್ಲಿ ಅನೇಕ ಆಯುರ್ವೇದ ಹಾಸ್ಪಿಟಲ್ ಗಳಿವೆ, ಆದರೆ ನೀವು ಕೆವಿಜಿ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವೇನು?
ನನ್ನ ಹೆಸರು ಹನ್ಸಾ ಚಂಡೇಂದ್ರ. ಮೂಲತಃ ನಾವು ಗುಜರಾತ್ ನವರು. ಸದ್ಯ ನಾವು ಲಂಡನ್ ನಲ್ಲಿ ನೆಲೆಸಿದ್ದೇವೆ. ನಮಗೆ ಮೂರು ಮಕ್ಕಳಿದ್ದು ಅವರು ಕೂಡ ಅಲ್ಲೇ ನೆಲೆಸಿದ್ದಾರೆ. ನಾನು ಕಳೆದ ಕೆಲವು ವರ್ಷಗಳಿಂದ ಕೇರಳಕ್ಕೆ ಚಿಕಿತ್ಸೆಗೆಂದು ಬರ್ತಾ ಇದ್ದೆ. ಆದರೆ ಹೆಚ್ಚಿನ ಫಲಿತಾಂಶ ಏನೂ ಕಂಡಿರಲಿಲ್ಲ. ಆದರೆ ಸುಳ್ಯದ ಕೆವಿಜಿ ಆಯುರ್ವೇದ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಂದು ಪರಿಚಯದವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದೆ.
ಇಲ್ಲಿ ನಿಮಗೆ ಯಾವ ರೀತಿಯ ಚಿಕಿತ್ಸೆ ನೀಡಿದ್ದಾರೆ. ಒಟ್ಟಾರೆ ಚಿಕಿತ್ಸೆ ಬಗ್ಗೆ ನಿಮ್ಮ ಅಭಿಪ್ರಾಯವೇನು..?
ಕೆವಿಜಿ ಆಯುರ್ವೇದ ಸಂಸ್ಥೆಯಲ್ಲಿ ಸಿಬ್ಬಂದಿ, ಆಡಳಿತ ಮಂಡಳಿ ನಮಗೆ ಅತ್ಯುತ್ತಮ ಸೇವೆ ನೀಡಿದೆ. ಪ್ರತಿಯೊಬ್ಬರೂ ಕೂಡ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಇಂತಹ ಆತಿಥ್ಯವನ್ನು ನಾನು ಬೇರೆಲ್ಲೂ ಕಂಡಿಲ್ಲ.
ಚಿಕಿತ್ಸೆಯ ಬಗ್ಗೆ ನಿಮ್ಮ ಅನುಭವ ಹಂಚಿಕೊಳ್ಳುವಿರಾ..?
ಕಳೆದ ಒಂದು ವಾರದಿಂದ ನಿರಂತರ ಚಿಕಿತ್ಸೆಯನ್ನು ಪಡೆದುಕೊಳ್ಲುತ್ತಿದ್ದೇವೆ. ಇಲ್ಲಿಗೆ ದಾಖಲಾಗುವ ಮೊದಲು ನನ್ನ ಗಂಡನಿಗೆ ಬಹಳಷ್ಟು ಆರೋಗ್ಯ ಸಮಸ್ಯೆಯಿತ್ತು. ಆದರೆ ಇಲ್ಲಿ ಚಿಕಿತ್ಸೆ ಪಡೆದ ನಂತರ ಚೆನ್ನಾಗಿ ಓಡಾಡುತ್ತಿದ್ದಾರೆ. ಮೊದಲು ವ್ಹೀಲ್ ಚೇರ್ ಅವಲಂಭಿಸುತ್ತಿದ್ದರು. ಆದರೆ ಈಗ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ. ಬಹಳ ಖುಷಿ ಇದೆ.
ಸುಳ್ಯದ ಬಗ್ಗೆ ಇಲ್ಲಿಗೆ ಬಂದ ನಂತರ ನೀವು ಏನು ತಿಳಿದುಕೊಂಡಿದ್ದೀರಿ..?
ಕುರುಂಜಿ ವೆಂಕಟರಮಣ ಗೌಡರು ಸಾಕಷ್ಟು ವಿದ್ಯೆ ಕಲಿಯದಿದ್ದರೂ ಇಷ್ಟು ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ್ದಾರೆ ಎಂದು ಕೇಳಿ ತಿಳಿದುಕೊಂಡೆ. ಇಲ್ಲಿನ ಜನರ ಮಾತು ನನಗೆ ತುಂಬಾ ಇಷ್ಟವಾಯಿತು. ನಾಳೆ ಹೊರಡುವುದಕ್ಕೆ ಸಿದ್ಧವಾಗಿದ್ದೇನೆ. ಆದರೆ ಒಂದಷ್ಟು ದಿನ ಇಲ್ಲಿಯೇ ಉಳಿದು ಹೋಗಬೇಕು ಎಂದು ಮನಸ್ಸು ಹಪಹಪಿಸುತ್ತಿದೆ.
ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಬಗ್ಗೆ ನಿಮ್ಮೂರಿನ ಜನರಿಗೆ ಏನು ಹೇಳ್ತಿರಾ..?
ಖಂಡಿತವಾಗಿಯು ನನ್ನ ಅಣ್ಣ ಮತ್ತೆ ಇತರ ಸಂಬಂಧಿಕರಿಗೆಲ್ಲ ತಿಳಿಸಿದ್ದೇನೆ. ಅವರು ಮುಂದಿನ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವವರಿದ್ದಾರೆ. ಏಕೆಂದರೆ ಇಲ್ಲಿನ ಚಿಕಿತ್ಸಾ ವಿಧಾನ ಬೇರೆಲ್ಲೂ ಸಿಗುವುದಕ್ಕೆ ಸಾಧ್ಯವೇ ಇಲ್ಲ.
ಕೆವಿಜಿ ಆಯುರ್ವೇದ ಆಸ್ಪತ್ರೆ ಇತರೆ ಆಸ್ಪತ್ರೆಗಳಿಂದ ಎಷ್ಟು ಭಿನ್ನವಾಗಿದೆ ಎಂದು ನಿಮಗೆ ಅನಿಸುತ್ತದೆ..?
ನಿಜವಾಗಿಯೂ ಕೆವಿಜಿ ಆಯುರ್ವೇದ ಆಸ್ಪತ್ರೆ ಇತರೆ ಆಸ್ಪತ್ರೆಗಳಿಂದ ತುಂಬಾನೆ ವಿಭಿನ್ನವಾಗಿ ನನಗೆ ಕಾಣುತ್ತದೆ. ಇಲ್ಲಿ ಪ್ರತಿಯೊಂದು ವಿಭಾಗದ ವೈದ್ಯರು, ಸಿಬ್ಬಂದಿ ಅತ್ಯಂತ ಕಾಳಜಿಯಿಂದ ರೋಗಿಗಳನ್ನು ಕಾಣುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇಂತಹ ಸೌಲಭ್ಯ ಬೇರೆಲ್ಲೂ ಸಿಗುವುದಕ್ಕೆ ಛಾನ್ಸೇ ಇಲ್ಲ.
ನಿಮಗೆ ಭಾರತದಲ್ಲಿ ಹೆಚ್ಚು ಇಷ್ಟವಾಗುವುದು ಯಾವುದು..?
ನನಗೆ ಭಾರತ ಭಾರತದ ಜನ ಇಲ್ಲಿಯ ಸಂಸ್ಕ್ರತಿ ಬಹಳ ಹಿಡಿಸಿದೆ. ನನಗೆ ಪ್ರಭು ಶ್ರೀರಾಮ ಹಾಗೂ ಶ್ರೀಕೃಷ್ಣ ಬಹಳ ಇಷ್ಟ.