ನ್ಯೂಸ್ ನಾಟೌಟ್: ಬೆಂಗಳೂರಿನ, ದ ಲಲಿತ್ ಅಶೋಕ್ ಹೋಟೆಲ್ನಲ್ಲಿ ಯುವ ಸಾಧಕರನ್ನು ಗುರುತಿಸಿ ಗೌರವಿಸುವ ಜೀ ಕನ್ನಡ ವತಿಯಿಂದ “ಯುವರತ್ನ” ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ತಳಮಟ್ಟದಿಂದ ಬೆಳೆದು ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರುತಿಸುವ ಕಾರ್ಯಕ್ರಮವೇ ಯುವರತ್ನ.ಅದರಂತೆ 2023-24 ರ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ಒಟ್ಟು 35 ಜನ ಯುವ ಸಾಧಕರು ಆಯ್ಕೆಯಾಗಿದ್ದರು. ಅವರೆಲ್ಲರನ್ನೂ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಗೌರವಿಸಿ “ಯುವರತ್ನ ಪ್ರಶಸ್ತಿ” ಪ್ರದಾನ ಮಾಡಲಾಯಿತು.
‘ಯುವರತ್ನ ಅವಾರ್ಡ್ಸ್’ ಕಾರ್ಯಕ್ರಮಕ್ಕೆ ಸಚಿವರಾದ ರಾಮಲಿಂಗರೆಡ್ಡಿ, ಚಲುವರಾಯಸ್ವಾಮೀ, ಸಂತೋಷ್ಲಾಡ್ ಮತ್ತು ಶಿವರಾಜ್ ತಂಗಡಗಿ ಆಗಮಿಸಿದ್ದರು. ಇವರ ಜೊತೆಗೆ ಚಿತ್ರರಂಗದ ಗಣ್ಯರಾದ ನಿರ್ಮಾಪಕಿ ಅಶ್ವಿನಿ ಪುನೀತ್ರಾಜ್ಕುಮಾರ್, ನಟ ವಿಜಯರಾಘವೇಂದ್ರ , ಆಕ್ಷನ್ ಪ್ರಿನ್ಸ್ ಧೃವಸರ್ಜಾ ಹಾಗೂ ಕಾಟೇರ ಚಿತ್ರದ ನಾಯಕಿ ಆರಾಧನ ಯುವ ಸಾಧಕರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ರಾಷ್ಟ್ರೀಯ ಕ್ರೀಡಾಪಟು, ಸುಳ್ಯದವರಾದ ಗೀತಾ ಗುಡ್ಡೆಮನೆ ಅವರು ಯುವರತ್ನ ಪ್ರಶಸ್ತಿಗೆ ಭಾಜನರಾಗಿದ್ದು ಹೆಮ್ಮೆಯ ವಿಷಯವಾಗಿದೆ.ಗೀತಾ ಅವರ ಅಕಾಡೆಮಿಕ್ ಸಾಧನೆ ಮತ್ತು ಕ್ರೀಡಾ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.ಇವರು ಕಂದಡ್ಕದ ಆನಂದ ಗೌಡ ಮತ್ತು ಜಯ ದಂಪತಿಯ ಪುತ್ರಿ.
ಯುವರತ್ನ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಕೆಳಕಂಡತಿದೆ.
1 ಡಾ. ಮನೋಜ್ ಕುಮಾರ್ ಕೃಷ್ಣಪ್ಪ – ಇಟಾಚಿ ಸಂಸ್ಥೆಯ ಹೋಲ್ ಟೈಮ್ ಡೈರೆಕ್ಟರ್ ಮತ್ತು ಕಂಟ್ರಿ ಹೆಡ್
2 ಬಸವರಾಜಪ್ಪ ಮಲ್ಲಪ್ಪ ಜರಾಲಿ – ಹಿರಿಯ ವಕೀಲರು ಹಾಗೂ ಬಾರ್ ಅಸೋಷಿಯೇಷನ್ ಅಧ್ಯಕ್ಷರು
3 ಸಿಎ ದಯಾನಂದ್ ಬೊಂಗಾಳೆ – ಹೂಡಿಕೆದಾರರು, ವರ್ತಕರು, ತರಬೇತುದಾರರು
4 ನವೀನ್ ಅಲ್ಮಾಜೆ – ಉದ್ಯಮಿ
5 ಡಾ. ಸತ್ಯಪ್ರಸಾದ್ ಶೆಟ್ಟಿ- ವೈದ್ಯರು
6 ಭರತ್ ಗೌಡ S V – ರಾಜಕೀಯ ಸಂಘಟಕರು
7 Dr. M.G.ರಂಗಧಾಮಯ್ಯ-ರಾಜಕೀಯ ಮುಖಂಡರು ಹಾಗೂ ಸಮಾಜ ಸೇವಕರು
8 ಶಿವರಾಜ್ ದೇಶ್ಮುಖ್ – ಸಮಾಜ ಸೇವಕರು
9 ಗಿರಿಮಲ್ಲಪ್ಪ ಕಲ್ಲಪ್ಪ ಜೋಗೂರ್-ಉದ್ಯ್ಯಮಿ
10 ಡಾ.S .ಛಾಯಾಕುಮಾರಿ-ಶಿಕ್ಷಣ ತಜ್ಞರು
11 ವಿಶ್ವನಾಥ್ G P. – ಕನ್ನಡಪರ ಹೋರಾಟಗಾರರು
12 T V. ಬಾಬು – ಸಮಾಜ ಸೇವಕರು ಹಾಗೂ ಯುವ ಮುಖಂಡರು
13 ಶ್ರೀ ಮಹದೇಶ್ವರ ಸ್ವಾಮೀಜಿ – ಉಪಾಧ್ಯಕ್ಷರು, ಬಸವಧರ್ಮ ಪೀಠ – ಮಹಾಮನೆ ಮಹಾಮಠ ಕೂಡಲಸಂಗಮ
14 ಬಸಲಿಂಗಪ್ಪ ನಿಂಗನೂರ್ – ಶಿಕ್ಷಣ ಪ್ರೇಮಿ
15 ಮಹಾಂತೇಶ್ ಟಿ. ಪೂಜಾರ್ – ಉದ್ಯಮಿ
16 ಅದಿತಿ – ಹೆಲ್ಪಿಂಗ್ ಹಾರ್ಟ್ಸ್ ಸಂಸ್ಥೆಯ ಅಧ್ಯಕ್ಷರು
17 G D.ಹರೀಶ್ ಗೌಡ – ಜನಪ್ರಿಯ ಶಾಸಕರು, ಹುಣಸೂರು ಕ್ಷೇತ್ರ
18 ಅರುಣ್ ಯೋಗಿರಾಜ್ – ಶಿಲ್ಪಿ
19 ಉದಯ್ ಶಿವಕುಮಾರ್ – ಉದ್ಯಮಿ
20 M.ಬಸವರಾಜ್ ಪಡುಕೋಟೆ – ಕನ್ನಡಪರ ಹೋರಾಟಗಾರ
21 ಸುರೇಶ್ ಸಿದ್ದಗೌಡ ನಾರಪ್ಪಗೋಳ – ಉದ್ಯಮಿ
22 ಡಾ.R S.ಶೆಟ್ಟಿಯನ್ – ಅಥೇನಾ ಹಾಸ್ಪಿಟಲ್ ಸಂಸ್ಥಾಪಕರು
23 ವೀಣಾ ಕಾಶಪ್ಪನವರ್ – ರಾಜಕೀಯ ಮುಖಂಡರು ಹಾಗೂ ಸಮಾಜ ಸೇವಕರು
24 ರಾಮೋಜಿಗೌಡ – ಶಿಕ್ಷಣ ಪ್ರೇಮಿ , ಯುವ ನಾಯಕರು
25 ಗಿರಿಧರ್ ರಾಜು K K – ಜ್ಯೋತಿಷಿ ಹಾಗೂ ವಾಸ್ತು ತಜ್ಞರು
26 ಡಾ. ಶ್ರೀಹರಿ ಕುಲಕರ್ಣಿ – ವೈದ್ಯ್ಯರು
27 ಚಿರಂತ್ ಗೌಡ – ಯುವ ಉದ್ಯಮಿ
28 ಡಾ. ಗೀತಾ ಗುಡ್ಡೆಮನೆ – ಕ್ರೀಡೆ ಮತ್ತು ಶಿಕ್ಷಣ
29 M. ವೆಂಕಟೇಶ್ – ರಾಜಕೀಯ ಮುಖಂಡರು ಹಾಗೂ ಸಮಾಜ ಸೇವಕರು
30 ಅನಿಲ್ ನಾಚಪ್ಪ – ರಾಜಕೀಯ ಮುಖಂಡರು, ಉದ್ಯಮಿ
31 ಸಂದೀಪ್ ಕುಮಾರ್ K K – ನುಕೋಟ್ ಸಂಸ್ಥೆಯ ನಿರ್ದೇಶಕರು
32 ಮುನಿರಾಜಪ್ಪ N . – ಅಣ್ಣೇಶ್ವರ ಗ್ರಾ.ಪಂ ಉಪಾಧ್ಯಕ್ಷರು
33 N K ಮಹೇಶ್ ಕುಮಾರ್ – ಯುವ ನಾಯಕರು ಹಾಗೂ ಸಮಾಜ ಸೇವಕರು
34 ಡಾ. ಶೇಖರ್ R ಮಾನೆ – ವೈದ್ಯರು ಹಾಗೂ ಸಮಾಜ ಸೇವಕರು
35 ACF ಕೃಷ್ಣಮೂರ್ತಿ-ಸಮಾಜ ಸೇವಕರು