ನ್ಯೂಸ್ ನಾಟೌಟ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತ ಸುತ್ತಿಕೊಂಡಿರೋ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ. ಇತ್ತೀಚೆಗೆ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ನಡುವಿನ ‘ಕಾಟೇರ’ ಟೈಟಲ್ ವಿವಾದ ಬೇರೆ ಕಡೆಗೆ ತಿರುಗಿತ್ತು.
ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದರ್ಶನ್ ಕೊಟ್ಟ ಹೇಳಿಕೆ ವಿರುದ್ಧ ಮಹಿಳಾ ಸಂಘಟನೆಯೊಂದು ಆಕ್ರೋಶ ಹೊರಹಾಕಿತ್ತು.
ದರ್ಶನ್ ತಮ್ಮ 25ನೇ ವರ್ಷದ ಸಿನಿ ಜರ್ನಿ ಸಂಭ್ರಮದ ವೇಳೆ “ಇವತ್ತು ಇವಳು ಇರುತ್ತಾಳೆ.. ನಾಳೆ ಅವಳು ಇರುತ್ತಾಳೆ” ಅಂತ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಯನ್ನು ಗೌಡತಿಯರ ಸೇನೆಯ ಮಹಿಳೆಯರು ಖಂಡಿಸಿದ್ದರು. ಅಷ್ಟೇ ಅಲ್ಲದೆ ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರನ್ನೂ ನೀಡಿದ್ದರು. ದರ್ಶನ್ ಕೊಟ್ಟ ಹೇಳಿಕೆಗಳಿಂದ ಮಹಿಳೆಯರಿಗೆ ಸಾರ್ವಜನಿಕವಾಗಿ ಅವಮಾನ ಆಗಿದೆ ಎಂದು ಆ ದೂರಿನಲ್ಲಿ ತಿಳಿಸಲಾಗಿತ್ತು.
ಎಂದು ವರದಿ ತಿಳಿಸಿದೆ. ಈ ಸಂಬಂಧ ಇಂದು (ಮಾರ್ಚ್ 1) ಕರ್ನಾಟಕ ರಾಜ್ಯ ಮಹಿಳಾ ಆಯೋಗ ದರ್ಶನ್ಗೆ ನೋಟಿಸ್ ನೀಡಿದೆ. ಹೆಣ್ಣು ಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ ಆರೋಪ ಮಾಡಿ ದೂರು ನೀಡಿದ್ದರಿಂದ ದರ್ಶನ್ಗೆ ಈ ನೋಟಿಸ್ ಜಾರಿಯಾಗಿದೆ. ಈ ನೋಟಿಸ್ ತಲುಪಿದ ಒಂದು ವಾರದೊಳಗೆ ಆಯೋಗದ ಕಚೇರಿಗೆ ಬಂದು ವಿವರಣೆ ನೀಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ.