ನ್ಯೂಸ್ ನಾಟೌಟ್ : ಇದೀಗ ಬೇಸಿಗೆ ಸಮಯ ಮನುಷ್ಯನಿಗೆ ಎಷ್ಟು ನೀರಿನ ಅವಶ್ಯಕತೆ ಇದೆಯೋ ಅಷ್ಟೇ ಅವಶ್ಯಕತೆ ಪ್ರಾಣಿ ಪಕ್ಷಿಗಳು ಸೇರಿದಂತೆ ಪ್ರತಿಯೊಂದು ಜೀವಿಗಳಿಗೂ ಇದೆ.ಹೀಗಾಗಿ ಆಹಾರ ನೀರನ್ನು ಅರಸಿಕೊಂಡು ಹಾವುಗಳು ಮೆಲ್ಲಗೆ ಮನೆ ಕಡೆ ತೆವಳಿಕೊಂಡು ಬರುತ್ತವೆ. ಇದೀಗ ದೈತ್ಯ ಹೆಬ್ಬಾವೊಂದು ಬಟ್ಟೆ ಅಮಗಡಿಗೆ ನುಗ್ಗಿರುವ ಘಟನೆ ಬಗ್ಗೆ ವರದಿಯಾಗಿದೆ.
ಈ ದೃಶ್ಯ ನೋಡಿ ಅಲ್ಲಿ ನೆರೆದ ಗ್ರಾಹಕರಿಗೆ ಶಾಕ್ ಆಗಿದೆ. ಗ್ರಾಹಕರ ಜೀವ ಬಾಯಿಗೆ ಬಂದಂತಾಗಿದೆ.ಇದೀಗ ಈ ಘಟನೆಯ ವಿಡಿಯೋವೊದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.ಹೌದು.. ಈ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಬಟ್ಟೆ ಅಂಗಡಿಯೊಂದರಲ್ಲಿ ನಡೆದಿದೆ. ಹೆಬ್ಬಾವು ಕಂಡ ಜನರು ಅಂಗಡಿಯಿಂದ ಚೀರುತ್ತಾ ಓಡಿ ಜೀವ ಉಳಿಸಿಕೊಂಡಿದ್ದಾರೆ. ದೈತ್ಯಾಕಾರದ ಹೆಬ್ಬಾವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ X ನಲ್ಲಿ ವೈರಲ್ ಆಗುತ್ತಿದೆ. ಇದನ್ನು ಎಕ್ಸ್ ಪೇಜ್ @anmolmeeruthiya ನಲ್ಲಿಯೂ ಹಂಚಿಕೊಳ್ಳಲಾಗಿದೆ.ಭಾರಿ ವೀಕ್ಷಣೆಯನ್ನು ಪಡೆದುಕೊಂಡಿದೆ.