ನ್ಯೂಸ್ ನಾಟೌಟ್ : ಮುಂಬರುವ ಲೋಕಸಭಾ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕಸರತ್ತು ನಡೆಯುತ್ತಿದ್ದು, ಕೊಡಗು ಮೈಸೂರು ಕ್ಷೇತ್ರದಲ್ಲಿ ಭಾರಿ ಮಹತ್ವದ ಬೆಳವಣಿಗೆಗಳಾಗುತ್ತಿವೆ ಅನ್ನೋದರ ಬಗ್ಗೆ ಚರ್ಚೆಗಳು ನಡಿತಿವೆ.ಅದಕ್ಕೆ ಕಾರಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೀಡಿರುವ ಆ ಒಂದು ಹೇಳಿಕೆ. ಹಾಗಾದರೆ ಅದೇನು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…
ಹೌದು, ಈ ಬಾರಿ ಪ್ರತಾಪ್ ಸಿಂಹಗೆ ಟಿಕೆಟ್ ಮಿಸ್ ಆಗಲಿದೆಯಾ ಎನ್ನುವ ಪ್ರಶ್ನೆ ಎದ್ದಿದೆ. ವಿಜಯೇಂದ್ರ ನಾಲ್ಕು ಗೋಡೆ ಮಧ್ಯೆ ಅನೇಕ ವಿಚಾರ ಚರ್ಚೆ ಆಗಿದ್ದು, ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.ಪರೋಕ್ಷವಾಗಿ ಪ್ರತಾಪ್ ಸಿಂಹ್ ಗೆ ಟಿಕೆಟ್ ಮಿಸ್ ಆಗುವ ಸುಳಿವು ನೀಡಿದರಾ? ಎಂಬ ಅನುಮಾನ ಮೂಡಿದೆ.
ಮಾತ್ರವಲ್ಲ, ಮೈಸೂರಿಗೆ ಯದುವೀರ್ ಒಡೆಯರ್ ಸ್ಪರ್ಧೆ ವಿಚಾರವಾಗಿ ವಿಜಯೇಂದ್ರ ಹೇಳಿಕೆ ನೀಡಿದ್ದು, ನಾನು ಊಹಾಪೋಹಾಗಳಿಗೆ ಉತ್ತರ ಕೊಡಲ್ಲ ನಾಲ್ಕು ಗೋಡೆಗಳ ಮಧ್ಯೆ ನಡೆದ ಚರ್ಚೆ ಬಹಿರಂಗಪಡಿಸಲ್ಲ. ಉತ್ತಮ, ಗೆಲ್ಲುವ ಅಭ್ಯರ್ಥಿ ಹಾಕ್ತೇವೆ ಎಂದು ವಿಜಯೇಂದ್ರ ಅವರು ಮೈಸೂರಲ್ಲಿ ಅಭ್ಯರ್ಥಿ ಬದಲಾವಣೆ ಸುಳಿವು ಕೊಟ್ಟಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರಕ್ಕೆ ಪ್ರತಾಪ್ ಸಿಂಹ, ಅಪ್ಪಚ್ಚು ರಂಜನ್, ಮೈಸೂರು ಮಹರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರು ಚರ್ಚೆಯಲ್ಲಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದರ ಜೊತೆಗೆ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೊತೆಗೆ ಪ್ರತಾಪ್ ಸಿಂಹಗೆ ಟಿಕೆಟ್ ಬೇಡ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ಸೇರಿ ಹಲವು ನಾಯಕರು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಸ್ಥಳೀಯ ನಾಯಕರ ಬೆಳವಣಿಗೆಗೆ ಸಿಂಹ ಕೊಡುಗೆ ಏನೂ ಇಲ್ಲ. ಸ್ಥಳೀಯ ನಾಯಕರ ಜೊತೆಗೆ ಬಹಿರಂಗವಾಗಿ ಕಾದಾಡುತ್ತಾರೆ. ಹೀಗಾಗಿ ಹೊಸಬರಿಗೆ ಟಿಕೆಟ್ ಕೊಡಿ ಎಂದು ಬಿಎಸ್ವೈ ಹೈಕಮಾಂಡ್ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.