ನ್ಯೂಸ್ ನಾಟೌಟ್ : ಬಾಲಿವುಡ್ನಟ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.ಇವರು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದಾರೆ. ಅಮಿತಾಬ್ ಅವರಿಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡ ಬೆನ್ನಲ್ಲೇ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.ಒಟ್ಟಿನಲ್ಲಿ ಅವರ ಆರೋಗ್ಯದ ಕುರಿತು ಆಸ್ಪತ್ರೆ ಅಥವಾ ಕುಟುಂಬದವರು ಹೆಲ್ತ್ ಅಪ್ಡೇಟ್ ನೀಡಲಿ ಎಂದು ಅಭಿಮಾನಿಗಳು ಇದೀಗ ನಿರೀಕ್ಷಿಸಿದ್ದಾರೆ.
81ರ ವಯಸ್ಸಿನ ಅಮಿತಾಭ್ ಈಗಲೂ ಉತ್ಸಾಹದಿಂದ ಕೆಲಸ ಮಾಡುವವರು.ದಣಿವರಿಯದ ಜೀವ. ಮೊನ್ನೆಯಷ್ಟೇ ಅವರು ಕಲ್ಕಿ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಮುಂಬೈಗೆ ಆಗಮಿಸಿದ್ದರು. ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ. ಸತತವಾಗಿ ಕಲ್ಕಿ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದ ಅವರು, ದಿಢೀರ್ ಅಂತ ಆಸ್ಪತ್ರೆಗೆ ದಾಖಲಾಗಿದ್ದರು.