ನ್ಯೂಸ್ ನಾಟೌಟ್: ಸುಳ್ಯದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಎನ್ ಎಮ್ ಪಿ ಯು ನಲ್ಲಿ 2024-25 ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಎಸ್ಎಸ್ಎಲ್ಸಿಯು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ವಿದ್ಯಾರ್ಥಿ ಭವಿಷ್ಯ ನಿರ್ಧರಿತವಾಗುವ ನಿಟ್ಟಿನಲ್ಲಿ ಇದು ಮೊದಲ ಮೆಟ್ಟಿಲು. ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣಕ್ಕಾಗಿ ಕಾಲೇಜಿನ ಆಯ್ಕೆಗಾಗಿ ಚಿಂತಿತರಾಗಬೇಡಿ. ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ಉತ್ತಮ ಶಿಕ್ಷಣಕ್ಕೆ ವಿಪುಲ ಅವಕಾಶಗಳಿವೆ.
NMPUC ಕುರುಂಜಿಭಾಗ್, ಸುಳ್ಯದ ಶಾಂತಿಯುತ ಮತ್ತು ಮಾಲಿನ್ಯ ಮುಕ್ತ ಪರಿಸರದಲ್ಲಿದ್ದು, ಮಕ್ಕಳ ವಿದ್ಯಾರ್ಜನೆಗೆ ಪೂರಕವಾಗಿದೆ. ಸಂಸ್ಥೆಯು ವಿದ್ಯಾರ್ಥಿಗಳ ಕಲಿಕೆಯ ಅನುಭವವನ್ನು ಹೆಚ್ಚಿಸುವ ಅತ್ಯಾಧುನಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಹೊಂದಿದೆ.ಮೂಲಭೂತವಾಗಿ ವಿದ್ಯಾರ್ಥಿಗಳ ಬೌದ್ಧಿಕ ದೈಹಿಕ ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಪ್ರಾಂಶುಪಾಲರು ಮತ್ತು ಉಪನ್ಯಾಸಕರು, ಮಾರ್ಗದರ್ಶಕರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಮಾಲೋಚನೆಯನ್ನು ಸಹ ನೀಡುತ್ತಾರೆ.ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಅರ್ಹತೆ ಮತ್ತು ಅಗತ್ಯಕ್ಕೆ ತಕ್ಕ ಹಾಗೆ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕೋರ್ಸ್ಗಳ ವಿವರ ಈ ಕೆಳಗಿನಂತಿವೆ.
ಪಿಯು ನಲ್ಲಿ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ತೆಗೆದುಕೊಂಡರೆ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ (HEPS) ಆಯ್ಕೆ ಮಾಡಿಕೊಳ್ಳಬಹುದು.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ(PCMB)
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ,ಗಣಕಶಾಸ್ತ್ರ (PCMC) ಆಯ್ಕೆ ಮಾಡಬಹುದು
ಸ್ಟಾಟಿಸ್ಟಿಕ್ಸ್, ಇಕನಾಮಿಕ್ಸ್, ಬ್ಯುಸಿನೆಸ್ ಸ್ಟಡೀಸ್, ಮತ್ತು ಅಕೌಂಟೆನ್ಸಿ (SEBA)
ಕಂಪ್ಯೂಟರ್ ಸೈನ್ಸ್,ಇಕನಾಮಿಕ್ಸ್,ಬ್ಯುಸಿನೆಸ್ ಸ್ಟಡೀಸ್ ಮತ್ತು ಅಕೌಂಟೆನ್ಸಿ (CEBA) ಆಯ್ಕೆ ಮಾಡಿಕೊಳ್ಳಬಹುದು.
ಉತ್ತಮ,ಅರ್ಹ ಮತ್ತು ಯುವ ಅಧ್ಯಾಪಕರು, ಉತ್ತಮ ವಿನ್ಯಾಸದ ಪೀಠೋಪಕರಣಗಳೊಂದಿಗೆ ವಿಶಾಲವಾದ ತರಗತಿ ಕೊಠಡಿಗಳು, 24 ಗಂಟೆಗಳ ವಿದ್ಯುತ್ ಪೂರೈಕೆಯೊಂದಿಗೆ ಸುಸಜ್ಜಿತ ಭೌತಶಾಸ್ತ್ರ/ರಸಾಯನಶಾಸ್ತ್ರ/ಜೀವಶಾಸ್ತ್ರ ಕಂಪ್ಯೂಟರ್/ಪ್ರಯೋಗಾಲಯಗಳು ಇಲ್ಲಿವೆ.ಆಡಿಯೋ ವಿಷುಯಲ್ ಕೊಠಡಿ, ಇ-ಕ್ಲಾಸ್ ಕೊಠಡಿ ಮತ್ತು ವಿಶಾಲವಾದ ಆಡಿಟೋರಿಯಂ ಇರುತ್ತದೆ.
24,000 ಸಂಪುಟಗಳ ಪುಸ್ತಕಗಳಿರುವ ಗ್ರಂಥಾಲಯ, ಇಂಟರ್ನೆಟ್ ಬ್ರೌಸಿಂಗ್ ಸೌಲಭ್ಯವಿದೆ. ಸೆಮಿನಾರ್ಗಳು, ಗೆಸ್ಟ್ ಟಾಕ್ಸ್, ಪ್ರಾಜೆಕ್ಟ್ಸ್, , ಕ್ಲಬ್ ಆಕ್ಟಿವಿಟೀಸ್, ವೃತ್ತಿ ಸಮಾಲೋಚನೆ ಇತ್ಯಾದಿ ಸೌಲಭ್ಯಗಳು ದೊರೆಯುತ್ತದೆ. ಆಧುನಿಕ ಮತ್ತು ಉತ್ತಮವಾಗಿ ನಿರ್ವಹಿಸಲಾದ ಹಾಸ್ಟೆಲ್ ಸೌಲಭ್ಯಗಳು ಹಾಗೂ ದೊಡ್ಡ ಆಟದ ಮೈದಾನ, ಕ್ರೀಡೆ ಮತ್ತು ಆಟಗಳಲ್ಲಿ ವಿಶೇಷ ತರಬೇತಿ ಒದಗಿಸಲಾಗುತ್ತದೆ. ಇದರೊಂದಿಗೆ NEET/CET/JEE ತರಗತಿಗಳು ಹಾಗೂ ಹುಡುಗರು ಮತ್ತು ಹುಡುಗಿಯರಿಗಾಗಿ NCC ವಿಭಾಗವಿದೆ. SSLC ಯಲ್ಲಿ 98% ಕ್ಕಿಂತ ಹೆಚ್ಚಿನ ಅಂಕಗಳಿಗೆ ವಿದ್ಯಾರ್ಥಿವೇತನ ಹಾಗೂ ಕ್ರೀಡಾ ವಿಭಾಗದಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ಸೌಲಭ್ಯವಿದೆ.ಇನ್ನು ಇಂತಹ ಹತ್ತು ಹಲವಾರು ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದುಕೊಳ್ಳಬಹುದು.