ನ್ಯೂಸ್ ನಾಟೌಟ್:ಅಂಗನವಾಡಿಗೆ ನುಗ್ಗಿ ನಗದನ್ನು ಅಥವಾ ಫುಡ್ನ್ನು ಹೊತ್ತೊಯ್ದು ಕಳ್ಳರು ಎಸ್ಕೇಪ್ ಆಗಿರೋ ಘಟನೆ ಬಗ್ಗೆ ಕೇಳಿದ್ದೇವೆ. ಆದರೆ ಈ ಕಳ್ಳರು ಮಾತ್ರ ಅದಕ್ಕು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅಂಗನವಾಡಿಯೊಳಗಿದ್ದ ಸ್ಟವ್ ಬಳಸಿ ಗಡದ್ದಾಗಿ ಆಮ್ಲೇಟ್ ಮಾಡಿ ತಿಂದ ಘಟನೆ ಬಗ್ಗೆ ವರದಿಯಾಗಿದೆ.ಹೌದು,ಇಂತಹ ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ..ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ..
ಪುತ್ತೂರಿನ ನೆಲ್ಲಿಕಟ್ಟೆಯ ಶ್ರೀ ರಾಮಕೃಷ್ಣ ಸಮಾಜ ಸೇವಾ ಸಂಸ್ಥೆಯ ಬಳಿಯ ಅಂಗನವಾಡಿ ಕೇಂದ್ರದಲ್ಲಿ ನಿನ್ನೆ ರಾತ್ರಿ ಈ ಘಟನೆ ಬಗ್ಗೆ ವರದಿಯಾಗಿದೆ.ಮೊದಲೇ ಅಂಗನವಾಡಿಗೆ ಫುಡ್ ಬರುತ್ತಿಲ್ಲ,ಮಕ್ಕಳು, ಗರ್ಭಿಣಿಯರು , ಬಾಣಂತಿಯರಿಗೆ ಎಡರು ತಿಂಗಳ ಫುಡ್ ಬಾಕಿಯಿದೆಯೆನ್ನುವ ದೂರುಗಳು ಕೇಳಿ ಬಂದಿವೆ.ಹೀಗಿರುವಾಗ ಮಕ್ಕಳಿಗೆಂದು ಬಂದಿರುವ ಮೊಟ್ಟೆಯನ್ನು ಆಮ್ಲೇಟ್ ಮಾಡಿ ತಿಂದಿದ್ದು ನಿಜಕ್ಕೂ ಖೇದಕರ ಸಂಗತಿ..
ಇಂದು ಬೆಳಿಗ್ಗೆ ಅಂಗನವಾಡಿ ಕಾರ್ಯಕರ್ತೆ ಬಂದಾಗ ಅಂಗನವಾಡಿಯ ಬಾಗಿಲ ಬೀಗ ಒಡೆದಿತ್ತು. ಒಳಗೆ ನೋಡಿದಾಗ ಅಡುಗೆ ಕೋಣೆಯಲ್ಲಿ ಪುಟಾಣಿಗಳಿಗೆಂದು ದಾಸ್ತಾನಿರಿಸಲಾಗಿದ್ದ ಮೊಟ್ಟೆಗಳು ಒಡೆದಿದ್ದು, ಪಕ್ಕದಲ್ಲಿರುವ ಗ್ಯಾಸ್ ಸ್ಟವ್ನ ಬಾಣಲೆಯಲ್ಲಿ ಆಮ್ಲೇಟ್ ತುಂಡು ಇರುವುದು ಕಂಡು ಬಂದಿದೆ.ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಅಂಗನವಾಡಿಗೆ ನುಗ್ಗಿ ಆಮ್ಲೇಟ್ ಮಾಡಿ ತಿಂದು ಹೋಗಿದ್ದಾರೆ. ಈ ಬಗ್ಗೆ ಅಂಗನವಾಡಿ ಶಿಕ್ಷಕಿ ದೂರು ದಾಖಲಿಸಿದ್ದಾರೆ.