ನ್ಯೂಸ್ ನಾಟೌಟ್: ತುಳುನಾಡು ಅಂದ್ರೆ ದೈವಾರಾಧನೆಗೆ ಹೆಚ್ಚು ಮಹತ್ವ ಇರುವ ಜಿಲ್ಲೆ.ಇದೀಗ ತುಳುನಾಡಿನ ಪುರಾಣ ಪ್ರಸಿದ್ಧ ಕೊಂಡಾಣ ದೈವಸ್ಥಾನದ ನಿರ್ಮಾಣ ಹಂತದ ಕಟ್ಟಡ ಧ್ವಂಸ ಪ್ರಕರಣ ಇಡೀ ಕರಾವಳಿ ಜನರ ದೈವ ಭಕ್ತರಿಗೆ ಶಾಕ್ ನೀಡಿದೆ.ಇದಕ್ಕೆ ಸಂಬಂಧಿಸಿ ಇದೀಗ ಮೂವರು ಆರೋಪಿಗಳನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.ಭಾನುವಾರ ಬೆಳಗ್ಗಿನ ಜಾವ ನೂತನ ಭಂಡಾರ ಮನೆ ಧ್ವಂಸಗೈದಿದ್ದ ಮೂರು ಆರೋಪಿಗಳಾದ ಮುತ್ತಣ್ಣ ಶೆಟ್ಟಿ, ಧೀರಜ್ ಹಾಗೂ ಶಿವರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್ ದೂರಿನಡಿ ಎಫ್ಐಆರ್ ದಾಖಲಾಗಿತ್ತು. ಐಪಿಸಿ 143, 147, 148, 295, 427 r/w 149 ipc and 2A kpdlp act ಅಡಿ ಎಫ್ಐಆರ್ ದಾಖಲಿಸಲಾಗಿದೆ. ಭಂಡಾರ ಮನೆ ಧ್ವಂಸ ಕೃತ್ಯವನ್ನ ಮೂವರು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಒಟ್ಟು 16 ಗುರಿಕಾರರು ಇರೋ ಕೊಂಡಾಣ ಪಿಲಿಚಾಮುಂಡಿ ದೈವಸ್ಥಾನದ ನೂತನ ಭಂಡಾರ ಮನೆ ನಿರ್ಮಾಣಕ್ಕೆ ವಿರೋಧವಿತ್ತು.ಹೀಗಾಗಿ ಧಾರ್ಮಿಕ ದತ್ತಿ ಕಮಿಷನರ್ ಹಾಗೂ ತಹಶೀಲ್ದಾರ್ ಅವರಿಗೂ ದೂರು ನೀಡಲಾಗಿತ್ತು. ಹೀಗಿದ್ದರೂ ಕಾಮಗಾರಿ ನಡೆಯುತ್ತಿದ್ದ ಕಾರಣ ಧ್ವಂಸ ಮಾಡಿದ್ದೇವೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.