ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಖರೀದಿಸೋದು ಟ್ರೆಂಡ್ ಆಗಿ ಬಿಟ್ಟಿದೆ. ಬಯಸುತ್ತಾರೆ. ಆಹಾರದಿಂದ ಹಿಡಿದು ಪೀಠೋಪಕರಣಗಳವರೆಗೆ ಎಲ್ಲವೂ ಕಡಿಮೆ ಬೆಲೆಗೆ ಆನ್ಲೈನ್ನಲ್ಲಿ ಲಭ್ಯವಿದೆ. ಒಂದು ಐಟಂ ಅನ್ನು ಆರ್ಡರ್ ಮಾಡಿದರೆ, ಇನ್ನೊಂದು ಐಟಂ ಮನೆಗೆ ಪಾರ್ಸೆಲ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಅಂತಹ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಯುವಕನೊಬ್ಬ ಆನ್ಲೈನ್ನಲ್ಲಿ ಮೊಬೈಲ್ ಆರ್ಡರ್ ಮಾಡಿದ್ದ. ಮನೆಗೆ ಬಂದಿರುವ ಪಾರ್ಸೆಲ್ ನೋಡಿದಾಗ ಆತನಿಗೆ ಶಾಕ್ ಆಗಿದೆ.
ಅಮಾಲಿಕ್ ತುಯ್ಯಬ್ ಎಂಬ ಯುವಕ ಆನ್ಲೈನ್ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ನಥಿಂಗ್ ಫೋನ್(2ಎ) ಅನ್ನು ಆರ್ಡರ್ ಮಾಡಿದ್ದಾನೆ. ಎರಡು ದಿನಗಳ ನಂತರ ಬಂದ ಪಾರ್ಸೆಲ್ ತೆರೆದು ನೋಡಿ ಶಾಕ್ ಆಗಿದ್ದಾನೆ.ಓಪನ್ ಮಾಡಿ ನೋಡಿದಾಗ ಫೋನ್ ಬದಲಿಗೆ ನಕಲಿ ಬ್ರ್ಯಾಂಡೆಡ್ (iKall) ಫೋನ್ ಇರುವುದನ್ನು ನೋಡಿ ಆಶ್ಚರ್ಯಕ್ಕೊಳಗಾಗಿದ್ದಾನೆ.
ಹೋಗ್ಲಿ ಇನ್ನೇನು ಮಾಡೋಣ ,ವಾಪಾಸ್ ಮಾಡೋಣ ಅಂತ ಫ್ಲಿಪ್ಕಾರ್ಟ್ ಸೇವಾ ಕೇಂದ್ರವನ್ನು ಸಂಪರ್ಕಿಸಿದ್ರೆ, ಯಾವುದೇ ಉತ್ತರ ಬಂದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ. ಮತ್ತು ಇದಕ್ಕೆ ಸಂಬಂಧಿಸಿದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.