ನ್ಯೂಸ್ ನಾಟೌಟ್: ಇಲ್ಲೊಂದು ಹಿಂದೂ – ಮುಸ್ಲಿಂ ಜೋಡಿಯೊಂದಕ್ಕೆ 50 ಲಕ್ಷ ಡಿಮ್ಯಾಂಡ್ ಮಾಡುತ್ತಾ ತಾಯಿಯೇ ವಿಲನ್ ಆಗಿರೋ ಘಟನೆ ಬಗ್ಗೆ ವರದಿಯಾಗಿದೆ.ಆಕೆ ಹಿಂದೂ ಹುಡುಗಿ,ಆತ ಮುಸ್ಲಿಂ ಹುಡುಗ.ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.ಹೀಗಿದ್ದರೂ ಅವರಿಗೆ ಲವ್ ಜಿಹಾದ್ ಅನ್ನೋ ಪಟ್ಟವನ್ನು ಸಮಾಜ ಇದುವರೆಗೆ ಕೊಟ್ಟಿರಲಿಲ್ಲ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದ ಮುಸ್ಲಿಂ ಯುವಕ ಯಾಸೀನ್ ಜಮಾದಾರ್ ಹಾಗೂ ಎಸ್ಸಿ ಸಮುದಾಯದ ಅಶ್ವಿನಿ ಭಂಡಾರಿ ಪರಸ್ಪರ ಪ್ರೀತಿಸಿದ್ದರು. ಈ ವಿಷಯ ಮನೆಯವರಿಗೆ ತಿಳಿದಾಗ ವಿರೋಧ ವ್ಯಕ್ತವಾಗಿತ್ತು. ಆಗ ಅವರು ಮನೆ ಬಿಟ್ಟು ಓಡಿ ಮದುವೆಯಾಗಿದ್ದರು. ಈಗ ಅಶ್ವಿನಿ ಮೂರು ತಿಂಗಳ ಗರ್ಭಿಣಿ.
ಯಾಸೀನ್ ಮತ್ತು ಅಶ್ವಿನಿ ಪ್ರೀತಿಸಿದರೂ ತಮ್ಮ ಮನೆ ಮಗಳನ್ನು ಬಿಟ್ಟುಕೊಡಲು ಒಪ್ಪದ ಅಶ್ವಿನಿ ಮನೆಯವರು ಬೇರೆ ಬೇರೆ ರೀತಿಯಲ್ಲಿ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆಪಾದಿಸಲಾಗಿದೆ. ನೀನು ಅವನನ್ನು ಬಿಟ್ಟು ಬಾ, ಗರ್ಭಪಾತ ಮಾಡಿಸಿ ಬೇರೆ ಮದುವೆ ಮಾಡುತ್ತೇವೆ ಎನ್ನುವುದು ಒಂದಾದರೆ, ಇನ್ನೊಂದು ಕಡೆ ರೌಡಿ ಶೀಟರ್ ಮೂಲಕ ಬೆ**ದರಿಕೆ ಹಾಕಿಸುತ್ತಿದ್ದಾರೆ ಎನ್ನಲಾಗಿದೆ. ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಮದ ರೌಡಿ ಶೀಟರ್ ಒಬ್ಬ ಬಂದು ʻʻನಮ್ಮ ಸಮಾಜದ ಯುವತಿಯನ್ನು ಮದುವೆಯಾಗಿದ್ದೀಯಾ. ಒಂದು ಲಕ್ಷ ಹಣ ಕೊಡದಿದ್ದರೆ ಮುಗಿಸಿಬಿಡ್ತೀನಿ’ಎಂದು ಬೆದರಿಕೆ ಹಾಕಿದ್ದನಂತೆ. ಜೀವ ಭಯದಲ್ಲಿದ್ದ ಯಾಸೀನ್ ಒಂದು ಲಕ್ಷ ರೂಪಾಯಿ ನೀಡಿದ್ದಾನೆ. ಈ ಹಣವನ್ನು ಹುಚ್ಚಪ್ಪ ಕಾಲೇಬಾಗ್, ಮುತ್ತಪ್ಪ ಹಾಗೂ ಅಶ್ವಿನಿಯ ತಾಯಿ ಹಂಚಿಕೊಂಡಿದ್ದಾರಂತೆ!.ಇದೀಗ ಬೇಡಿಕೆಯ ಮೊತ್ತವೂ 50 ಪಕ್ಷ ರೂ.ಗಳಿಗೆ ಏರಿದೆಯಂತೆ.ಇದಕ್ಕೆ ಆಶ್ವಿನಿಯ ತಾಯಿಯೂ ಸಾಥ್ ನೀಡಿದ್ದಾರಂತೆ.ಹೀಗಾಗಿ ಯಾಸಿನ್ ಪೊಲೀಸ್ ದೂರು ನೀಡಿದ್ದಾರೆ.
ಜಿಲ್ಲಾ ಪೊಲೀಸರು ಅಶ್ವಿನಿ ಹಾಗೂ ಯಾಸೀನ್ ದೂರನ್ನು ಸ್ವೀಕಾರ ಮಾಡಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಕಳುಹಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ನವ ವಿವಾಹಿತ ಜೋಡಿಗೆ ಜಿಲ್ಲಾ ಅಪರ ಪೊಲೀಸ್ ವರಿಷ್ಟಾಧಿಕಾರಿಗಳು ಕಾನೂನು ನೆರವು ಹಾಗೂ ರಕ್ಷಣೆ ನೀಡೋದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.