ನ್ಯೂಸ್ ನಾಟೌಟ್ : ಕೆಲವೊಮ್ಮೆ ಅವಕಾಶಗಳು ಕೈ ಬೀಸಿ ಕರೆದಾಗ ನಾವು ಅದನ್ನು ಬಾಚಿ ಪಡೆದುಕೊಳ್ಳಬೇಕಾಗುತ್ತದೆ.ಯಾಕೆಂದ್ರೆ ಅವಕಾಶಗಳು ಸಿಗೋದೇ ಕಡಿಮೆ.ಅದರಲ್ಲೂ ಸಿನಿಮಾದ ವಿಷಯಕ್ಕೆ ಬಂದ್ರೆ ಯಾವ ಮೂವಿ ಯಾವ ಟೈಮ್ನಲ್ಲಿ ಹಿಟ್ ಆಗುತ್ತೆ ಅನ್ನೋದನ್ನು ಹೇಳಲು ಅಸಾಧ್ಯ. ಭಾರತೀಯ ಚಿತ್ರರಂಗದಲ್ಲಿ ಇಂತಹ ಹಲವು ನಿದರ್ಶನಗಳು ಇಂದು ನಮ್ಮ ಕಣ್ಮುಂದಿವೆ. ಹೆಸರಾಂತ ನಟರು, ನಟಿಮಣಿಯರು ಕಥೆ ಕೇಳಿ, ನಂತರ ಇದು ತಮಗೆ ಬೇಡವೆಂದು ರಿಜೆಕ್ಟ್ ಮಾಡಿದ ಸಿನಿಮಾಗಳು ಊಹೆಗೂ ಮೀರಿದಷ್ಟು ಗೆಲುವು ದಾಖಲಿಸಿ, ಭರ್ಜರಿ ಯಶಸ್ವಿಯಾಗಿವೆ. ತಾವು ನಿರಾಕರಿಸಿದ ಚಿತ್ರಗಳು ಇಷ್ಟೊಂದು ಸಕ್ಸಸ್ ಆಯ್ತಾ? ಎಂದು ಅವರೇ ಕಡೆಗೆ ಪಶ್ಚಾತ್ತಾಪ ಪಟ್ಟಿದ್ದೂ ಇದೆ.
ಸದ್ಯ ಇದೇ ರೀತಿಯಲ್ಲಿ ಒಂದು ಬಾಲಿವುಡ್ನ ಸ್ಟಾರ್ ನಟರು ನಿರಾಕರಿಸಿದ ಸಿನಿಮಾವೊಂದು ಬಾಕ್ಸ್ ಆಫೀಸ್ನಲ್ಲಿ ಅಂದಿನ ಕಾಲಕ್ಕೆ ಮೈಲಿಗಲ್ಲು ಸಾಧಿಸಿದ್ದು, ಭರ್ಜರಿ ಗಳಿಕೆ ಕಾಣುವುದರ ಜತೆಗೆ ಬರೋಬ್ಬರಿ ಮೂರು ರಾಷ್ಟ್ರಪ್ರಶಸ್ತಿಗಳನ್ನು ಸ್ವೀಕರಿಸಿತು. ವಿಲನ್, ಆ್ಯಕ್ಷನ್ ಇಲ್ಲದ ಈ ಸಿನಿಮಾವನ್ನು ಬಾಲಿವುಡ್ ಬಾದ್ಷಾ ಶಾರೂಖ್ ಖಾನ್, ಸೈಫ್ ಅಲಿ ಖಾನ್, ರಣಬೀರ್ ಕಪೂರ್ ಮತ್ತು ಕಾಜೋಲ್ ಅವರಂತಹ ಸೂಪರ್ಸ್ಟಾರ್ಗಳು ಮಾಡಬೇಕಾಗಿತ್ತು. ಆದರೆ ಅವರು ಈ ಚಿತ್ರವನ್ನು ಒಪ್ಪಿರಲಿಲ್ಲವಂತೆ!!
ಆ ಸಿನಿಮಾವೇ ಅಮಿರ್ ಖಾನ್ ನಟಿಸಿದ ‘3 ಈಡಿಯಟ್ಸ್!’.ಇದು ಬಿಡುಗಡೆಯಾದ ಬಳಿಕ ದೊಡ್ಡ ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು. ‘3 ಈಡಿಯಟ್ಸ್’, ಬಾಲಿವುಡ್ನ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾಯಿತು.ಅಮೀರ್ ಖಾನ್, ಆರ್. ಮಾಧವನ್, ಶರ್ಮನ್ ಜೋಶಿ, ಬೊಮನ್ ಇರಾನಿ ಮತ್ತು ಕರೀನಾ ಕಪೂರ್ ಖಾನ್ ನಟಿಸಿದ ಈ ಚಿತ್ರವನ್ನು ಖ್ಯಾತ ನಿರ್ದೇಶಕ ರಾಜ್ಕುಮಾರ್ ಹಿರಾನಿ ನಿರ್ದೇಶಿಸಿದ್ದಾರೆ. ಚಿತ್ರವು ಭಾವನಾತ್ಮಕ ಮತ್ತು ಹಾಸ್ಯಮಯ ದೃಶ್ಯಗಳಿಂದ ಕೂಡಿದ್ದು, ಸಂಪೂರ್ಣ ಕಥೆಯು ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳ ಸ್ನೇಹ ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆಯ ಅಡಿಯಲ್ಲಿ ಸಾಮಾಜಿಕ ಒತ್ತಡಗಳ ಬಗ್ಗೆ ಸುತ್ತುವರೆದಿದೆ.
ಈ ಚಿತ್ರಕ್ಕಾಗಿ ನಟ ಶಾರೂಖ್ ಖಾನ್ ಅವರನ್ನು ಮೊದಲಿಗೆ ಸಂಪರ್ಕಿಸಲಾಗಿತ್ತು. ಆದರೆ, ಕಿಂಗ್ ಖಾನ್ ತಮ್ಮ ಬ್ಯುಸಿ ಶೆಡ್ಯೂಲ್ನಿಂದ ಈ ಚಿತ್ರವನ್ನು ತಿರಸ್ಕರಿಸಿದರು. ತದನಂತರ ರಣಬೀರ್ ಕಪೂರ್ ಜತೆಗೆ ಮಾತನಾಡಿದರು. ಆದರೆ, ರಣಬೀರ್ ರಾಂಚೋ ಪಾತ್ರವನ್ನು ಮಾಡಲು ಒಪ್ಪಲಿಲ್ಲ.ಇದಲ್ಲದೆ, ಆರ್. ಮಾಧವನ್ ಪಾತ್ರಕ್ಕೆ ಸೈಫ್ ಅಲಿ ಖಾನ್ ಮತ್ತು ಜಾನ್ ಅಬ್ರಹಾಂಗೆ ಕೇಳಲಾಗಿತ್ತು. ಆದರೆ ಇವರಿಬ್ಬರು ಕೂಡ ದಿನಾಂಕದ ಸಮಸ್ಯೆಗಳಿಂದ ಈ ಚಿತ್ರವನ್ನು ತಿರಸ್ಕರಿಸಿದರು.
ಇನ್ನು ಕರೀನಾ ಕಪೂರ್ ಖಾನ್ ಬದಲಿಗೆ ಕಾಜೋಲ್ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ ಆ ಪಾತ್ರ ತಮಗೆ ಖುಷಿ ಕೊಡುವುದಿಲ್ಲ ಎಂದು ಭಾವಿಸಿದ ನಟಿ, ತಮಗೆ ಒಲಿದುಬಂದ ಆಫರ್ ಅನ್ನು ತಿರಸ್ಕರಿಸಿದರು. ತದನಂತರ ನಾಯಕಿಯ ರೋಲ್ಗೆ ಕರೀನಾ ಅವರನ್ನು ಫೈನಲ್ ಮಾಡಲಾಯಿತು. ಚಿತ್ರಮಂದಿರಗಳಲ್ಲಿ ರಿಲೀಸ್ ಕಂಡ ‘3 ಈಡಿಯಟ್ಸ್’ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್ ಮಾಡಿತು.