ನ್ಯೂಸ್ ನಾಟೌಟ್ : ನೀವು ಮನೆಯಲ್ಲಿ ನಾಯಿಯನ್ನು ಸಾಕಿದವರಾಗಿದ್ದರೆ ನಿಮ್ಗೆ ಗೊತ್ತಿರಬಹುದು. ರಾತ್ರಿಯಲ್ಲಿ ನಾಯಿಗಳು ಕೂಗುವ ಶಬ್ದವನ್ನು ಪ್ರತಿನಿತ್ಯ ನೀವೆಲ್ಲ ಕೇಳಿರಬಹುದು. ರಾತ್ರಿ ಹೊತ್ತಲ್ಲಿ ನಾಯಿಗಳು ಅತಿ ಹೆಚ್ಚು ಬೊಗಳುವುದು ಮತ್ತು ಜೋರಾಗಿ ಅಳುವುದನ್ನ ನೋಡಬಹುದು. ನಾಯಿಗಳು ಅಳುವುದು ಕೆಟ್ಟ ಶಕುನ ಎಂಬ ನಂಬಿಕೆಯೂ ಇದೆ.
ಹಾಗಾದರೆ ಇದಕ್ಕೆ ಕಾರಣವೇನು? ರಾತ್ರಿ ಹೊತ್ತಲ್ಲಿ ನಾಯಿ ಅಳುವುದು ಅನೇಕ ಕೆಟ್ಟ ಘಟನೆಗಳ ಸಂಕೇತವಾಗಿದೆ ಎಂದು ಹೇಳಲಾಗಿದೆ. ಹಾಗೆಯೇ ಮನೆಯ ಹೊರಗೆ ನಾಯಿ ಕೂಗಿದರೆ ಅಶುಭ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಮನೆ ಮುಂದೆ ನಾಯಿ ಅತ್ತರೆ ಅದನ್ನು ಅಲ್ಲಿಂದ ಓಡಿಸುತ್ತಾರೆ.
ನಾಯಿಯು ರಾತ್ರಿ ಹೊತ್ತು ಬೊಗಳಿದಾಗಲೆಲ್ಲಾ ಅದರ ಸುತ್ತಲೂ ಕೆಲವು ರೀತಿಯ ನಕಾರಾತ್ಮಕ ಶಕ್ತಿ ಇರುತ್ತದೆ ಎಂದು ಕೆಲವರು ಹೇಳುತ್ತಾರೆ. ಆ ನೆಗೆಟಿವ್ ಎನರ್ಜಿ ನೋಡಿದ ನಾಯಿಗಳು ಜೋರಾಗಿ ಬೊಗಳುತ್ತವೆ ಎನ್ನುತ್ತಾರೆ. ನಾಯಿಗಳು ಕತ್ತಲೆಯಲ್ಲಿ ದುಷ್ಟಶಕ್ತಿಗಳನ್ನು ನೋಡಬಹುದು ಎಂದು ಕೆಲವರು ನಂಬುತ್ತಾರೆ. ನಾಯಿ ಜೋರಾಗಿ ಬೊಗಳಿದರೆ ಇದು ಕೆಟ್ಟ ಶಕುನ ಎಂದು ಪರಿಗಣಿಸುತ್ತಾರೆ.
ಮನುಷ್ಯರನ್ನು ಆಕರ್ಷಿಸಲು ನಾಯಿಗಳು ಕೂಗುತ್ತವೆ ಮತ್ತು ಬೊಗಳುತ್ತವೆ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಹಳೆ ಪ್ರದೇಶದಿಂದ ಹೊಸ ಜಾಗಕ್ಕೆ ಬರುವಾಗ, ದಾರಿ ತಪ್ಪಿದಾಗಲೂ ನಾಯಿಗಳು ಹೀಗೆ ಮಾಡುತ್ತವೆ. ತಮ್ಮ ಹಿಂಡಿನಿಂದ ಬೇರ್ಪಟ್ಟಾಗಲೂ.. ಒಂಟಿತನ ಅನುಭವಿಸಿ ನಾಯಿಗಳು ಅಳುತ್ತವೆ.