ನ್ಯೂಸ್ ನಾಟೌಟ್: ‘ಬಿಗ್ ಬಾಸ್’ (Bigg Boss) ಖ್ಯಾತಿಯ ತನಿಷಾ ಕುಪ್ಪಂಡ (Tanisha Kuppanda) ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಉದ್ಯಮಿಯಾಗಿಯೂ ವೃತ್ತಿ ಆರಂಭಿಸಿದ್ದಾರೆ.
ಹೋಟೆಲ್ ಉದ್ಯಮದ ನಂತರ ಇದೀಗ ಆಭರಣ ಮಳಿಗೆಗೆ ತನಿಷಾ ಚಾಲನೆ ನೀಡಿದ್ದು ಎಲ್ಲೆಡೆ ಸುದ್ದಿಯಾಗಿದೆ. ನಟಿಯ ಹೊಸ ಹೆಜ್ಜೆಗೆ ‘ಬಿಗ್ ಬಾಸ್’ ಸ್ಪರ್ಧಿಗಳು ಕೂಡ ಸಾಥ್ ನೀಡಿದ್ದಾರೆ. ಬಿಗ್ ಬಾಸ್ ಮುಗಿಯುತ್ತಿದ್ದಂತೆ ತಮಗೆ ಸಿಕ್ಕಿರುವ ಜನಪ್ರಿಯತೆಯನ್ನು ಸದುಪಯೋಗಪಡಿಸಿಕೊಳ್ತಿದ್ದಾರೆ. ಈಗೀನ ಕಾಲಕ್ಕೆ ತಕ್ಕಂತೆ ಮಹಿಳಾ ಮಣಿಗಳಿಗೆ ಇಷ್ಟವಾಗುವ ಹಾಗೇ ಸ್ಟೈಲೀಶ್ ಆಭರಣಗಳು ತನಿಷಾ ಜ್ಯುವೆಲ್ಲರಿಯಲ್ಲಿ ಸಿಗಲಿದೆ.
ತನಿಷಾ ಹೊಸ ಹೆಜ್ಜೆಗೆ ಸಾಥ್ ನೀಡಲು ಲೂಸ್ ಮಾದ ಯೋಗಿ ದಂಪತಿ, ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಮಹೇಶ್, ಸಿರಿ, ಪವಿ ಪೂವಪ್ಪ, ರಕ್ಷಕ್, ನಮ್ರತಾ ಗೌಡ, ವರ್ತೂರು ಸಂತೋಷ್, ವಿನಯ್ ಗೌಡ, ನೀತು ವನಜಾಕ್ಷಿ, ಸ್ನೇಹಿತ್ ಗೌಡ, ಕಿರುತೆರೆ ನಟಿ ಭವ್ಯಾ ಗೌಡ, ಕಾರುಣ್ಯ ರಾಮ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.